ಮೋದಿಯವರು ಅಶೋಕ ಗೆಹ್ಲೋಟರನ್ನು ಹೊಗಳಿದ್ದು ಗಮನಿಸಿದರೆ ಅನುಮಾನವಾಗ್ತಿದೆ- ಸಚಿನ್ ಪೈಲಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋದಿಯವರು ಅಶೋಕ ಗೆಹ್ಲೋಟರನ್ನು ಹೊಗಳಿದ್ದು ಗಮನಿಸಿದರೆ ಅನುಮಾನವಾಗ್ತಿದೆ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಗೆಹ್ಲೋಟರನ್ನು ಹೊಗಳಿದ್ದಾರೆ. ಹೊಗಳಿಕೆಯ ರಾಶಿ ನನಗೆ ತುಂಬಾ ಆಸಕ್ತಿದಾಯಕವಾಗಿ ಕಾಣುತ್ತಿದೆ. ಏಕೆಂದರೆ ಈ ಹಿಂದೆ ಪ್ರಧಾನಿ ಮೋದಿ ಸಂಸತ್‌ನಲ್ಲಿ ಜಿ.ಎನ್. ಆಜಾದ್ ಅವರನ್ನೂ ಹೀಗೆ ಹೊಗಳಿದ್ದರು. ಆದರೆ ನಂತರ ಏನಾಯ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ನಿಜವಾಗಿಯೂ ಕುತೂಹಲಕಾರಿ ಬೆಳವಣಿಗೆ ಇದನ್ನು ಯಾರೂ ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

ಮೋದಿ ರಾಜಸ್ಥಾನದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಹೊಗಳಿದ್ದರು. ಗೆಹ್ಲೋಟ್ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿಗಳು ಅಷ್ಟೇ ಅಲ್ಲದೆ ಅವರೊಬ್ಬ ಅನುಭವಿ ರಾಜಕಾರಣಿ ಎಂದು ಹೇಳಿದ್ದರು. ಇದೀಗ ಈ ಪ್ರಶಂಸೆಯೇ ರಾಜಸ್ಥಾನ ಕಾಂಗ್ರೆಸ್ಸಿನಲ್ಲಿ ಕಳವಳ ಸೃಷ್ಟಿಸಿದೆ. ಮೊದಲಿನಿಂದಲೂ ಅಶೋಕ ಗೆಹ್ಲೊಟ್ ಅವರಿಗೆ ಕಾಂಗ್ರೆಸ್ ಒಳಗಿನಿಂದಲೇ ಪ್ರತಿಸ್ಪರ್ಧಿ ಎಂದುಗುರುತಿಸಲಾಗುತ್ತಿರುವ ಸಚಿನ್ ಪೈಲಟ್ ಅವರು ಈ ವಿದ್ಯಮಾನದ ಮೇಲೆ ಅನುಮಾನದ ಅಲೆಗಳನ್ನೇ ಸೃಷ್ಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!