ಸಿನಿಮಾ ಟಿಕೆಟ್‌ಗಳನ್ನ ಹಿಂಗೂ ಬುಕ್‌ ಮಾಡ್ತಾರಾ?:ಅಬ್ಬಬ್ಬಾ..ಶಿವ ಕಾರ್ತಿಕೇಯನ್‌ ಫ್ಯಾನ್ಸ್‌ ಸಾಮಾನ್ಯರಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಭಿಮಾನಿಗಳು ತಮ್ಮ ನೆಚ್ಚಿನ ಸಿನಿ ನಾಯಕರ ಮೇಲೆ ವಿಭಿನ್ನವಾಗಿ ತಮಗಿರುವ ಪ್ರೀತಿ/ಅಭಿಮಾನವನ್ನು ತೋರಿಸುತ್ತಾರೆ. ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯಾದರಂತೂ ಅಭಿಮಾನಿಗಳಿಗೆ ಹಬ್ಬವೇ ಸರಿ. ಥಿಯೇಟರ್ ಬಳಿ ಅಭಿಮಾನಿಗಳು ಗಲಾಟೆ/ಕುಣಿದು ಕುಪ್ಪಳಿಸುವುದು, ಹಾಲಿನ ಅಭಿಷೇಕ, ಭಾರೀ ಕಟೌಟ್‌ಗಳು ಹೀಗೆ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಇದೀಗ ಶಿವ ಕಾರ್ತಿಕೇಯನ್ ಅಭಿನಯದ ಪ್ರಿನ್ಸ್ ಸಿನಿಮಾದ ಬಗ್ಗೆ ತಮಿಳು ಅಭಿಮಾನಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಜಾತಿ ರತ್ನಾಲು ನಿರ್ದೇಶಕ ಅನುದೀಪ್ ನಿರ್ದೇಶನದ ಪ್ರಿನ್ಸ್ ಚಿತ್ರ ತಮಿಳಿನ ಸ್ಟಾರ್ ಹೀರೋ ಶಿವ ಕಾರ್ತಿಕೇಯನ್ ನಾಯಕನಾಗಿ ಮತ್ತು ಉಕ್ರೇನಿಯನ್ ನಟಿ ಮರಿಯಾ ನಾಯಕಿಯಾಗಿ ನಟಿಸಿದ್ದಾರೆ. ದೀಪಾವಳಿ ಉಡುಗೊರೆಯಾಗಿ ಅಕ್ಟೋಬರ್ 21 ರಂದು ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ತೆರೆಯಲಾಗಿದೆ.

ತಮಿಳುನಾಡಿನ ಥಿಯೇಟರ್ ಒಂದರಲ್ಲಿ ಶಿವ ಕಾರ್ತಿಕೇಯನ್ ಅಭಿನಯದ ಪಿನ್ಸ್ ಸಿನಿಮಾಗೆ ಅಭಿಮಾನಿಗಳು ಸೀಟುಗಳನ್ನು ಸೆಲೆಕ್ಟ್ ಮಾಡಿದ್ದು, ʻಎಸ್.ಕೆʼ ಬರುವಂತೆ ಟಿಕೆಟ್ ಬುಕ್ ಮಾಡಿದ್ದಾರೆ. ಟಿಕೆಟ್ ಬುಕ್ಕಿಂಗ್‌ನಲ್ಲಿ ಎಸ್‌ಕೆ ಬರುವಂತೆ ಬುಕ್ ಮಾಡಿರುವ ಈ ಫೋಟೋ ಇದೀಗ ವೈರಲ್ ಆಗಿದೆ. ಶಿವ ಕಾರ್ತಿಕೇಯನ್ ಅವರ ಅಭಿಮಾನಿಗಳು ಸಿನಿಮಾದ ದಿನ ಎಸ್‌ಕೆ ಆಕಾರದಲ್ಲಿ ಕುಳಿತು ಸಿನಿಮಾ ನೋಡಲು ಸಿದ್ಧರಾಗಿದ್ದಾರೆ. ಈ ಫೋಟೋ ನೋಡಿದವರೆಲ್ಲಾ ಸಿನಿಮಾ ಟಿಕೆಟ್ ಗಳನ್ನು ಕೂಡ ಹಿಂಗೂ ಬುಕ್ ಮಾಡುತ್ತಾರಾ ಎಂದು ಆಶ್ಚರ್ಯ ಪಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!