ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶುಭಾ ಪೂಂಜಾ ಅವರ ತಾಯಿ ಸುಲೋಚನ ಪೂಂಜಾ ಅವರು ಮಾಚ್ 6 ರಂದು ನಿಧನರಾಗಿದ್ದಾರೆ.
ಈ ಕುರಿತು ನಟಿ ಶುಭ ಪೂಂಜಾ ಭಾವುಕ ಪೋಸ್ಟ್ ಮಾಡಿದ್ದು, ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ, ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ. 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ. ಈಗ ನಾನು ಏನು ಮಾಡಲಿ ? ಎಲ್ಲಿ ಹೋಗಲಿ? ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ ? ನೀನು ನನ್ನ ಯಾಕೆ ಬಿಟ್ಟು ಹೋದೆ ? ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಇದರ ಜೊತೆಗೆ ‘ನಾನು ಮಾರ್ಚ್ 6 ರಂದು ನನ್ನ ತಾಯಿಯನ್ನು ಕಳೆದುಕೊಂಡೆ. ಒಂದು ದಿನದ ಹಿಂದೆ… ನನ್ನ ಜೀವನ ಅವಳ ಸುತ್ತ ಮಾತ್ರ ಸುತ್ತುತ್ತಿತ್ತು. ಅವಳು ನನ್ನ ಜೀವನ.. ನಾನು ಏನೇ ಮಾಡಿದರೂ ಅದು ಅವಳ ಸುತ್ತಲೂ ಮಾತ್ರ ಇತ್ತು. ಇಂದು ನಾನು ದುರಸ್ತಿ ಮಾಡಲಾಗದಷ್ಟು ವಿನಾಶಗೊಂಡಿದ್ದೇನೆ.. ಅವಳಿಲ್ಲದ ಜೀವನವನ್ನು ನಾನು ಊಹಿಸಲು ಸಾಧ್ಯವಿಲ್ಲ .. ಅವಳಿಲ್ಲದೆ ನನ್ನ ಜೀವನಕ್ಕೆ ಯಾವುದೇ ಅರ್ಥವಿಲ್ಲ .. ನನ್ನ ಹೃದಯವು ಮಿಲಿಯನ್ ತುಂಡುಗಳಾಗಿ ಒಡೆದಿದೆ .. ಏಕೆಂದರೆ ನನ್ನ ತಾಯಿಯೇ ಎಲ್ಲವೂ. ನನ್ನ ಜೀವನ ಎಂದಿಗೂ ಒಂದೇ ಆಗಿರುವುದಿಲ್ಲ .. ಮತ್ತು ನಾನು ಎಂದಿಗೂ ಒಂದೇ ಆಗಿರಲು ಸಾಧ್ಯವಿಲ್ಲ . . . ನನ್ನ ನಗು ಕಳೆದುಹೋಗಿದೆ ಅಮ್ಮಾ..ಎಂದು ಬರೆದುಕೊಂಡಿದ್ದಾರೆ.
ಶುಭಾ ಪೂಂಜಾ ಮಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಶುಭ ಪೂಂಜಾ ತಾಯಿಗೆ 70 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಅಟ್ಯಾಕ್ (pneumonia attack) ಆಗಿ ಲಂಗ್ಸ್ ನಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೆರಾಗಿತ್ತು ಎನ್ನಲಾಗಿದೆ. ಅಲ್ಲದೇ ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸುಲೋಚನಾ ಪೂಂಜಾ ನಿಧನರಾಗಿದ್ದಾರೆ.