ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿ 19 ವರ್ಷದ ಯುವತಿಗೆ ಮಂಗನ ಜ್ವರ ಬಾಧಿಸಿದೆ.
ಕ್ಯಾಸನೂರು ಅರಣ್ಯ ಕಾಯಿಲೆ ಎಂದು ಕರೆಯಲ್ಪಡುವ ಈ ಜ್ವರ ಯುವತಿಗೆ ಪಾಸಿಟಿವ್ ಬಂದಿದ್ದು, ಮಲೆನಾಡಿನಲ್ಲಿ ಆತಂಕ ಮನೆಮಾಡಿದೆ.
ಹೊಸನಗರದ ಸಂಪೆಕಟ್ಟೆ ಬಳಿಯ ಗ್ರಾಮವೊಂದರ ಯುವತಿಗೆ ಮಂಗನ ಜ್ವರ ಬಾಧಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಹೀಮೋಗ್ಲೋಬಿನ್ ಮಟ್ಟ ತೀರಾ ಕಡಿಮೆ ಇತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಸುಧಾರಣೆ ಕಂಡಿರಲಿಲ್ಲ. ಇದೀಗ ಬಾಲಕಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.