ಹೊಸ ದಿಗಂತ ವರದಿ, ಕಲಬುರಗಿ:
ವಕ್ಫ್ ಹೆಸರಿನಲ್ಲಿ ರೈತರ ಜಮೀನು ಕಬಳಿಸಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ನೇಗಿಲ ಯೋಗಿ ಸ್ವಾಭಿಮಾನ ವೇದಿಕೆ ಕಲಬುರಗಿ ವತಿಯಿಂದ ಹಮ್ಮಿಕೊಂಡಿದ್ದ ವಕ್ಫ್ ಹಟಾವೋ ಅನ್ನದಾತ ಬಚಾವೋ ಪ್ರತಿಭಟನೆಯಲ್ಲಿ ವಾನರನು ಎಂಟ್ರಿ ಕೊಟ್ಟ ಪ್ರಸಂಗ ನಡೆಯಿತು.
ವಕ್ಫ್ ವಿರುದ್ಧ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಭಾಷಣದ ಅಂತಿಮದಲ್ಲಿ ಹನುಮ (ವಾನರ) ಎಂಟ್ರಿಕೊಟ್ಟಿದ್ದು ನಾಡಿನ ರೈತರಿಗೆ ಶುಭ ಸಂಕೇತವಾಗಿದೆ ಎಂದು ಶ್ರೀಗಳು ಬಣ್ಣಿಸಿದರು.ವಾನರನ ಆಗಮನ ವೇದಿಕೆ ಮೇಲೆ ಆಗುತ್ತಿದ್ದಂತೆ ಜಮಾಯಿಸಿದ್ದ ಸಾವಿರಾರು ಜನರು ಜೈ ಶ್ರೀರಾಮ್ ಘೋಷಣೆ, ಚಪ್ಪಾಳೆ,ಶಿಳ್ಳೆ ಹೊಡೆದ ನಮಸ್ಕರಿಸಿದರು.
ಪುನಃ ಮಾತನಾಡಿದ ಆಂದೋಲಾ ಶ್ರೀಗಳು, ರಾಮ ಮಂದಿರದ ಕುರಿತು ನ್ಯಾಯಾಧೀಶರು ತೀರ್ಪು ಬರೆಯುವಾಗ ಮೂರು ದಿನಗಳ ನ್ಯಾಯಾಲಯದ ಕೀಟಕಿಯಲ್ಲಿ ರಾಮನ ಭಂಟ ವಾನರನು ಬಂದು ಕುಳಿತಿದ್ದನು. ಅದರ ಶುಭ ಸಂಕೇತವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಯಿತು. ಅದೇ ಮಾದರಿಯಲ್ಲಿ ರೈತರ ಜಮೀನು , ಹಿಂದು ಮಠ ಮಾನ್ಯಗಳ ಆಸ್ತಿಯನ್ನು ಕಸಿದುಕೊಳ್ಳುತ್ತಿರುವ ವಕ್ಫ್ ಬೋರ್ಡ್ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಅದೇ ವಾನರ ಎಂಟ್ರಿ ಕೊಟ್ಟಿದ್ದಾನೆ.ಇದರಿಂದ ಒಂದಂತ್ತು ಸತ್ಯ ನಾಡಿನ ರೈತರಿಗೆ ಜಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಹೇಳಿದರು.