ಅತ್ತ ಗೌತಮ್ ಅದಾನಿ ವಿರುದ್ಧ ಅಮೆರಿಕ ಆರೋಪ: ಇತ್ತ ಅದಾನಿ ಗ್ರೂಪ್ ಷೇರು ಮೌಲ್ಯ ಶೇ.23ರಷ್ಟು ಕುಸಿತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆಯಾದ ಬೆನ್ನಲ್ಲೇ ಇತ್ತ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ.

ಅದಾನಿ ಗ್ರೂಪ್‌ನ ಷೇರುಗಳು ಗುರುವಾರ ಶೇ.23% ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕುಸಿದಿದ್ದು, ಸಂಸ್ಥೆಯ ಮಾರುಕಟ್ಟೆ ಬಂಡವಾಳದ ಪೈಕಿ 2.8 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.

ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಬರೊಬ್ಬರಿ 23.44% ರಷ್ಟು ಕುಸಿದು 2,159 ರೂ.ಗೆ ಮೌಲ್ಯ ಇಳಿಕೆಯಾಗಿದೆ.

ಅದಾನಿ ಎಂಟರ್‌ಪ್ರೈಸಸ್‌ ಮಾತ್ರವಲ್ಲದೇ ಅದಾನಿ ಗ್ರೀನ್ ಎನರ್ಜಿ ಷೇರುಗಳ ಮೌಲ್ಯ ಕೂಡ 18% ಕುಸಿದು ರೂ 1,145 ಕ್ಕೆ ತಲುಪಿದರೆ, ಅದಾನಿ ಪೋರ್ಟ್ಸ್ 13.11% ಕಡಿಮೆಯಾಗಿ ರೂ 1,120 ಕ್ಕೆ ಕುಸಿದಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇ.20ರಷ್ಟು ಕುಸಿದಿದ್ದು, ರೂ 697.70 ರೂ.ಗೆ ಇಳಿಕೆಯಾಗಿದೆ. ಅಂತೆಯೇ ಅದಾನಿ ಟೋಟಲ್ ಗ್ಯಾಸ್ ಷೇರುಗಳ ಮೌಲ್ಯ ಶೇ. 10.35% ಕುಸಿದು ರೂ 602.65, ಮತ್ತು ಅದಾನಿ ಪವರ್ 9.55% ಕುಸಿದು ರೂ 474ಗೆ ಕುಸಿದಿದೆ. ಅದಾನಿ ವಿಲ್ಮರ್ 10%, ಎಸಿಸಿ ಸಿಮೆಂಟ್ 8%, ಅಂಬುಜಾ ಸಿಮೆಂಟ್ 12.5% ​​ಮತ್ತು ಅದಾನಿ ಒಡೆತನದ NDTV ಷೇರು ಮೌಲ್ಯ ಕೂಡ 0.5% ಕುಸಿದವು ಎಂದು ತಿಳಿದುಬಂದಿದೆ.

ಇನ್ನು ಅದಾನಿ ಸಂಸ್ಥೆಗಳ ಮಾತ್ರವಲ್ಲದೇ ಅದಾನಿ ಗ್ರೂಪ್ ಕಂಪನಿಗಳಿಗೆ ಮಾನ್ಯತೆ ಹೊಂದಿರುವ ಬ್ಯಾಂಕಿಂಗ್ ಸಂಸ್ಥೆಗಳ ಷೇರುಗಳು ಸಹ ತೀವ್ರ ಕುಸಿದಿವೆ. ಈ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಬ್ಯಾಂಕ್ ಆಫ್ ಬರೋಡಾ (ಬಿಒಬಿ), ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗುರುವಾರ ಇಂಟ್ರಾಡೇ ವಹಿವಾಟಿನಲ್ಲಿ ಶೇ. 7% ಕ್ಕಿಂತ ಹೆಚ್ಚು ಕುಸಿದವು.

ಭಾರತದ ಈಕ್ವಿಟಿ ಮಾರುಕಟ್ಟೆ ಮಾನದಂಡವಾದ ಎನ್‌ಎಸ್‌ಇ ನಿಫ್ಟಿ ಗುರುವಾರ 0.71% ರಷ್ಟು ಕಸಿದಿದ್ದು, ಬಿಎಸ್‌ಇ ಸೆನ್ಸೆಕ್ಸ್ ಶೇ.0.51% ರಷ್ಟು ಸೂಚ್ಯಂಕ ಕುಸಿದಿದೆ. ಅಂತೆಯೇ ಅಮೆರಿಕ ಮೂಲದ ಹೂಡಿಕೆ ಸಂಸ್ಥೆ GQG ಪಾಲುದಾರರ ಷೇರುಗಳು ಮಂಗಳವಾರ ಶೇ.20% ರಷ್ಟು ಕುಸಿದಿದ್ದವು. GQG ಅದಾನಿ ಗ್ರೂಪ್ ಕಂಪನಿಗಳಲ್ಲಿ ಪ್ರಮುಖ ಹೂಡಿಕೆದಾರ ಸಂಸ್ಥೆಯಾಗಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!