ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯವು (ಡಿಜಿಎಚ್‌ಎಸ್) ಮಂಕಿಫಾಕ್ಸ್ ಕಾಯಿಲೆಯ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ತಿಳಿಸಿದೆ.
ದೆಹಲಿಯಲ್ಲಿ ವಿದೇಶೀ ಪ್ರವಾಸದ ಇತಿಹಾಸವನ್ನೇ ಹೊಂದಿರದ ವ್ಯಕ್ತಿಯೊಬ್ಬರಲ್ಲಿ ಮಂಕಿಫಾಕ್ಸ್ ದೃಢಪಟ್ಟಿತ್ತು. ಆ ಮೂಲಕ ದೇಶದಲ್ಲಿ ನಾಲ್ಕನೇ ಮಂಕಿಫಾಕ್ಸ್ ಪ್ರಕರಣ ದಾಖಲಾಗಿತ್ತು . ಪ್ರಸ್ತುತ ಮಂಕಿಫಾಕ್ಸ್ ಗೆ ತುತ್ತಾಗಿರುವ ಪಶ್ಚಿಮ ದೆಹಲಿಯ ನಿವಾಸಿ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೀಗ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
“ಸೋಂಕಿನ ಮೂಲವನ್ನು ಗುರುತಿಸುವುದು, ವರ್ಧಿತ ಸಂಪರ್ಕ ಪತ್ತೆಹಚ್ಚುವಿಕೆ, ಖಾಸಗಿ ವೈದ್ಯರ ಪರೀಕ್ಷಾ ಸಂವೇದನೆ ಇತ್ಯಾದಿಗಳಂತಹ ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.