June 10, 2026
Wednesday, June 10, 2026
spot_img

Monsoon Diaries Part-1 | ಸಿಟಿ ಲೈಫ್ ಕಾದಾಟಕ್ಕೆ ಬ್ರೇಕ್ ಹಾಕಿ.. ನೇಚರ್ ಜೊತೆ ‘ಮಾನ್ಸೂನ್ ರಾಗ’ ಶುರು ಮಾಡಿ!!

ಮಾನ್ಸೂನ್ ಬಂತು ಅಂದ್ರೆ ಸಾಕು. ಈ ಟ್ರಾವೆಲ್ ಮಾಡೋರ್ಗಂತು ಏನೋ ಒಂಥರಾ ನಿಧಿ ಸಿಕ್ಕಷ್ಟು ಖುಷಿ ಆಗುತ್ತೆ. ಸಿಟಿ ಲೈಫಲ್ಲಿ ಬದುಕ್ತಿರೋ ನಮಗೆ ಅದೇ ಟ್ರಾಫಿಕ್ ಕಿರಿಕಿರಿ, ಬಿಸಿಲು, ಟೆನ್ಶನ್, ಮನೆ ಮಂದಿ ಪ್ರಾಬ್ಲಮ್ಸ್, ಆಫೀಸ್ ಕಾದಾಟ ಇವೆಲ್ಲ ವಿಚಾರ ಮೈಂಡ್ ಅನ್ನು ಕಸದ ರಾಶಿ ಹಾಗೆ ಮಾಡಿರುತ್ತೆ.. ಇದೆಲ್ಲಾದ್ರಿಂದ ಬ್ರೇಕ್ ಬೇಕು ಅಂತ ಅನ್ನಿಸಿದಾಗ ಬರೋದೇ ಈ ಮಳೆಗಾಲ, ಮೋಡಕವಿದ ವಾತಾವರಣ ತಂಪಾದ ಗಾಳಿ ಎತ್ತ ನೋಡಿದರೂ ಕಾರ್ಮೋಡ ಕವಿದ ಆಕಾಶ ಈ ವಾತಾವರಣ ನೋಡ್ತಾ ಇದ್ದಾಗೆ ಮನಸ್ಸಿಗೆ ಏನೋ ಒಂಥರಾ ಸಂತೋಷ, ನೆಮ್ಮದಿ ಸಿಗುತ್ತದೆ.

ಅದಕ್ಕೆ ಎಷ್ಟೋ ಜನ ಟ್ರಾವೆಲರ್ಸ್ ಮಳೆ ಬಂದ್ರೆ ಸಾಕಪ್ಪ ಒಂದು ಲಾಂಗ್ ರೈಡ್ ಲಾಂಗ್ ಡ್ರೈವ್ ಇಲ್ಲ ಊರು ಬಿಟ್ಟೆ ಹೋಗ್ಬಿಡೋಣ ಅನ್ನೋ ಮನಸ್ಥಿತಿಗೆ ಬಂದುಬಿಡುತ್ತಾರೆ.

ಎಷ್ಟೋ ಜನ ಜೂನ್ ಬರ್ಲಿ ಅಂತಾನೆ ಕಾಯ್ತಿರ್ತಾರೆ, ಮಾನ್ಸೂನ್ ಬಂತು ಅಂದ್ರೆ ಎಲ್ಲಿ ಟ್ರಿಪ್ ಹೋಗ್ಬೇಕು ಎಷ್ಟು ದಿನ ಹೋಗಬೇಕು ಏನು ಮಾಡಬೇಕು ಅನ್ನೋ ದೊಡ್ಡ ಲಿಸ್ಟನ್ನೇ ರೆಡಿ ಮಾಡಿ ಇಟ್ಟುಕೊಂಡಿರುತ್ತಾರೆ. ಒಮ್ಮೆ ಸವಾರಿ ಶುರುವಾದ್ರೆ ಆಮೇಲೆ ಹಿಂತಿರುಗಿ ನೋಡು ಮಾತೇ ಇಲ್ಲ.

ಅದೇನೋ ಹೇಳ್ತಾರಲ್ಲ.. ಹೋಗೋ ಜಾಗಕ್ಕಿಂತ ಹೋಗ್ತಿರೋ ದಾರಿನೇ ತುಂಬಾ ಸುಂದರವಾಗಿರುತ್ತೆ ಅಂತ.. ಹಂಗೆ ಮಳೆ ಟೈಮಲ್ಲಿ ನೀವೆಲ್ಲಿಗೆ ಹೋದರೂ ನೀವು ತಲುಪುವ ಜಾಗಕ್ಕಿಂತ ನೀವು ಹೋಗ್ತಾ ಇರೋ ದಾರಿನೇ ಬಹಳ ಸುಂದರವಾಗಿ ಕಣ್ಣಿಗೆ ಕಾಣಿಸುತ್ತೆ.

ಸುತ್ತಮುತ್ತ ಎಲ್ಲೇ ನೋಡಿದರೂ ಹಚ್ಚಹಸಿರಿನಿಂದ ತುಂಬಿದ ರಸ್ತೆ, ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಮಳೆ ನಮ್ಮ ಮನಸ್ಸನ್ನು ಬಹಳ ಪ್ರಶಾಂತವಾಗಿಡಲು ಪ್ರೇರೇಪಿಸುತ್ತದೆ.

ರಸ್ತೆಯಲ್ಲಿ ಸಾಗುತ್ತಾ ಹೋದಾಗ ನಮಗನ್ನಿಸೋದು ಒಂದೇ.. ಈ ಸಮಯ ಈ ಗಳಿಗೆ ಇದೇ ರೀತಿ ಜೀವನಪರ್ಯಂತ ಮುಂದುವರೆದರೆ ಜೀವನ ಎಷ್ಟು ಸುಂದರವಾಗಿರುತ್ತೆ ಅಲ್ವಾ ಅಂತ ಅನ್ಸುತ್ತೆ.. ಕೆಲವೊಮ್ಮೆ ಅಂತೂ ಈ ಹೋಗ್ತಿರೋ ದಾರಿ ಎಲ್ಲೂ ನಿಲ್ಲಬಾರದು ಇದೇ ರೀತಿ ಹೋಗ್ತಾ ಇರಬೇಕು ಹೀಗೆ ಸಾಗುತ್ತಿರಬೇಕು ಅನ್ನೋ ಮನೋಭಾವ ಬಂದಿಬಿಡುತ್ತದೆ.. ಬಹುಶಹ ಇದಕ್ಕೆ ಅನ್ಸುತ್ತೆ ಎಷ್ಟೋ ಜನ ಮಳೆಗಾಲ ಅಂದ್ರೆ ಅಷ್ಟೊಂದು ಇಷ್ಟಪಡುತ್ತಾರೆ.

ಲೈಫಲ್ಲಿ ಒಮ್ಮೆಯಾದರೂ ನಮಗೆ ನಾವು ಸಮಯ ಕೊಡಲೇಬೇಕು ನಮ್ಮ ಮನಸ್ಥಿತಿ ಜೊತೆ ನಾವು ಸಂತೋಷವಾಗಿ ಜೀವನ ಕಲಿಯಲೇಬೇಕು. ಜೀವನಪೂರ್ತಿ ಟೆನ್ಶನ್ ಪ್ರಾಬ್ಲಮ್ ಇದ್ದಿದ್ದೆ, ಆದರೆ ಅದೆಲ್ಲದರ ನಡುವೆ ನಮ್ಮ ಸಂತೋಷ ನಮ್ಮ ನೆಮ್ಮದಿಯನ್ನ ನಾವು ಕಳೆದುಕೊಳ್ಳಬಾರದು. ನಾವು ಸಂತೋಷವಾಗಿದ್ರೆ ತಾನೇ ನಮ್ಮ ಜೊತೆ ಇರೋರ್ನ ನಾವು ಸಂತೋಷವಾಗಿ ನೋಡ್ಕೊಳ್ಳೋಕೆ ಸಾಧ್ಯ..

ಮತ್ತೆ ಇನ್ಯಾಕೆ ತಡ ಇನ್ನು ಮಳೆಗಾಲ ಮುಗ್ದಿಲ್ಲ ಮಳೆಗಾಲ ಮುಗಿಯುವಷ್ಟರಲ್ಲಿ ಒಮ್ಮೆಯಾದರೂ ಆ ಪ್ರಕೃತಿಯ ಮಡಿಲಲ್ಲಿ ಬೆರೆತು ಒಂದಾಗಿ ಆ ಸವಿಯನ್ನು ಸವಿಯಿರಿ ಆ ಪ್ರಕೃತಿ ಸೌಂದರ್ಯವನ್ನು ಅನುಭವಿಸಿ ನಿಮ್ಮ ಸಮಯವನ್ನು ನೀವು ಕಲಿಯಿರಿ ನಿಮ್ಮ ಸಂತೋಷವನ್ನು ನೀವೇ ಹುಡುಕಿಕೊಳ್ಳಿ.. ದುಡ್ಡು ಇದ್ದಾಗ ಸುತ್ತಾಡೋದಲ್ಲ ವಯಸ್ಸು ಇದ್ದಾಗ ಸುತ್ತಾಡಿ.. ಈ ದಿನ ನಮ್ಮದು ನಾಳೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ ಇವತ್ತಿನ ದಿನ ನೀವು ಖುಷಿಯಾಗಿದ್ದು ಇನ್ನೊಬ್ಬರ ಖುಷಿಗೂ ಕಾರಣರಾಗಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !