Tuesday, March 28, 2023

Latest Posts

ಯುವಕರನ್ನು ಹಳ್ಳಿಗೆ ಮರಳಿ ಕರೆತರಲು ಉತ್ತರಾಖಂಡದಲ್ಲಿ ಹೆಚ್ಚು ಹೂಡಿಕೆ : ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರಾಖಂಡ್ ಆವೃತ್ತಿಯ ರೋಜಗಾರ್ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಚಾಲನೆ ನೀಡಿದರು. ಹೊಸದಾಗಿ ನೇಮಕಾತಿ ಮಾಡಿಕೊಳ್ಳಲಾಗಿರುವ 71 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಿದರು.

ನವದೆಹಲಿಯಿಂದಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ರೋಜ್​ಗಾರ್ ಮೇಳ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೀವನೋಪಾಯಕ್ಕಾಗಿ ದೊಡ್ಡ ನಗರಗಳಿಗೆ ವಲಸೆ ಹೋಗುವ ರಾಜ್ಯದ ಯುವಕರಿಗೆ ಉತ್ತರಾಖಂಡದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ ಎಂದು ತಿಳಿಸಿದರು

ಈ ವೇಳೆ “ಹೊಸ ಶಿಕ್ಷಣ ನೀತಿಯ ಪ್ರಕಾರ ಈಗಿನ ಮಕ್ಕಳನ್ನು ಹೊಸ ಶತಮಾನಕ್ಕೆ ತಯಾರು ಮಾಡುವಲ್ಲಿ ಶಿಕ್ಷಕರು ದೊಡ್ಡ ಪಾತ್ರ ವಹಿಸಬೇಕು” ಎಂದು ಮೋದಿ ಹೇಳಿದರು.

“ಉತ್ತರಾಖಂಡದ ಮೂಲಸೌಕರ್ಯ ವಲಯದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳು ದೂರದ ಹಳ್ಳಿಗಳಿಗೆ ಸಂಪರ್ಕವನ್ನು ಹೆಚ್ಚಿಸುವುದಲ್ಲದೆ, ತಮ್ಮ ಮನೆಗಳ ಸಮೀಪವಿರುವ ಯುವಕರಿಗೆ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಆದ್ದರಿಂದ ರಾಜ್ಯದ ಯುವಕರು ಹಳ್ಳಿಗಳಿಗೆ ಹಿಂತಿರುಗುತ್ತಾರೆ” ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!