ಕೇರಳದಲ್ಲಿ ರೈಲಿಗೆ ಇನ್ನಷ್ಟು ಸ್ಪೀಡ್: ಕಡಿದಾದ ತಿರುವುಗಳಿಗೆ ಇಲಾಖೆಯಿಂದ ಸರ್ಜರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ರೈಲುಗಳು ಮುಂದಿನ ಮೂರು ತಿಂಗಳಿನಲ್ಲಿ ಇನ್ನಷ್ಟು ವೇಗ ಪಡೆದುಕೊಳ್ಳಲಿವೆ! ಹೌದು ರಾಜ್ಯದಲ್ಲಿ ಹಾದುಹೋಗುವ ಹಳಿಗಳಲ್ಲಿರುವ ತಿರುವುಗಳನ್ನು ಸರಿಪಡಿಸಲು ಇಲಾಖೆ ಮುಂದಾಗಿದ್ದು, ಮುಂದಿನ ಮೂರು ತಿಂಗಳಿನ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ತಿರುವನಂತಪುರಂ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮನೀಶ್ ತಪ್ಲಿಯಾಲ್, ತಿರುವನಂತಪುರ ಮಂಗಳೂರು ನಡುವೆ ಸಂಚರಿಸುವ ರೈಲುಗಳ ವೇಗ ಹೆಚ್ಚಿಸಲು ಈಗಿರುವ ಹಳಿಗಳ ಕಡಿದಾದ ತಿರುವುಗಳನ್ನು ನೇರಗೊಳಿಸುವ ಪ್ರಯತ್ನ ಆರಂಭಿಸಲಾಗಿದೆ. ಪ್ರಸ್ತುತ ವೇಗ ರೈಲು ಮಾರ್ಗಗಳ ಮೇಲಿನ ಮಿತಿ 110ಕಿಮೀ.ಆಗಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಲು ಕ್ರಮಗಳು ಸಾಗಿದೆ ಎಂದು ಹೇಳಿದ್ದಾರೆ.

ಗುಡ್ಡಗಾಡು ಪ್ರದೇಶ ಹಾಗೂ ಕಡಲಿಗೆ ಹೊಂದಿಕೊಂಡ ಭಾಗಗಳಲ್ಲಿ ಹಾದುಹೋಗುವ ರೈಲು ಹಳಿಗಳು ಅಲ್ಲಲ್ಲಿ ಕಡಿದಾದ ತಿರುವುಗಳನ್ನು ಹೊಂದಿದೆ. ಇದು ರೈಲುಗಳ ವೇಗಕ್ಕೆ ಕಡಿವಾಣ ಹಾಕುತ್ತವೆ. ಇದಕ್ಕೆ ಪರಿಹಾರ ಒದಗಿಸಲು ಈಗ ಇಲಾಖೆ ಹೆಜ್ಜೆಯಿರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!