Monday, March 27, 2023

Latest Posts

ಕಿರುಕುಳದ ಆರೋಪ ಹೊತ್ತ ನೂರಕ್ಕೂ ಅಧಿಕ ಪಾದ್ರಿಗಳಿನ್ನೂ ಚರ್ಚ್‌ನಲ್ಲಿ ಸಕ್ರಿಯ: ಪೋರ್ಚುಗಲ್‌ ಆಯೋಗದ ವರದಿ ತೆರೆದಿಟ್ಟ ಅಂಶವಿದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಕ್ಕಳ ಮೇಲೆ ಲೈಗಿಂಕ ದೌರ್ಜನ್ಯದ ಆರೋಪ ಹೊತ್ತಿರುವ 100ಕ್ಕೂ ಹೆಚ್ಚು ಪಾದ್ರಿಗಳು ಪೋರ್ಚುಗಲ್‌ನಲ್ಲಿನ ಚರ್ಚ್‌ ಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೋರ್ಚುಗಲ್‌ ನ ತನಿಖಾ ಆಯೋಗವೊಂದು ಹೇಳಿದೆ. ಕಳೆದ ವರ್ಷ ಜನವರಿಯಿಂದ ಆಯೋಗವು ಈ ವಿಷಯದ ಕುರಿತಾಗಿ ತನಿಖೆ ನಡೆಸುತ್ತಿದ್ದು ಇತ್ತೀಚೆಗೆ ತನ್ನ ವರದಿಯನ್ನು ಪ್ರಕಟಿಸಿದ್ದು ಕನಿಷ್ಟವೆಂದರೂ 4,815 ಮಕ್ಕಳು ಶೋಷಣೆಗೆ ಒಳಗಾಗಿದ್ದು ಪೋರ್ಚುಗಲ್‌ನ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಸದಸ್ಯರು ಅದರಲ್ಲೂ ಮುಖ್ಯವಾಗಿ ಪಾದ್ರಿಗಳು ಈ ರೀತಿಯಾಗಿ ಲೈಂಗಿಕವಾಗಿ ಶೋಷಣೆಯಲ್ಲಿ ಆರೋಪಿತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿಲಾಗಿದೆ.

ಈ ಸಂಖ್ಯೆಗಳು ʼಮಂಜುಗಡ್ಡೆಯ ತುದಿʼಯಂತೆ. ಅರ್ಥಾತ್‌ ಈಗ ಕಾಣಿಸುತ್ತಿರುವುದಕ್ಕಿಂತಲೂ ಹೆಚ್ಚಿನ ಘಟನೆಗಳು ನಡೆದಿವೆ ಎಂಬರ್ಥದಲ್ಲಿ ತನಿಖಾ ಆಯೋಗವು 4,815 ಪ್ರಕರಣಗಳನ್ನು ಕನಿಷ್ಟ ಸಂಖ್ಯೆ ಎಂದು ವಿವರಿಸಿದೆ. ಆದರೆ ಈ ರೀತಿಯಾಗಿ ಲೈಂಗಿಕ ಆರೋಪ ಹೊತ್ತಿರುವ ಪಾದ್ರಿಗಳು ಇನ್ನೂ ಚರ್ಚುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆಯೋಗದ ನೇತೃತ್ವ ವಹಿಸಿರುವ ಪೆದ್ರೋ ಸ್ಟ್ರೆಚ್ಟ್ ಹೇಳಿರುವುದಾಗಿ ಮೂಲಗಳ ವರದಿ ಉಲ್ಲೇಖಿಸಿದೆ.

ಚರ್ಚ್‌ಗೆ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಕಚೇರಿಗೆ ಕಳುಹಿಸಲು ಆರೋಪಿ ಪಾದ್ರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಆಯೋಗ ಹೇಳಿದ್ದು ಪಟ್ಟಿಯಲ್ಲಿರುವವರನ್ನು ಅವರ ಪಾತ್ರಗಳಿಂದ ತೆಗೆದುಹಾಕಬೇಕು ಅಥವಾ ಅವರ ಮೇಲಿನ ತನಿಖೆ ಮುಗಿಯುವವರೆಗೆ ಅಂಥವರು ಮಕ್ಕಳು ಮತ್ತು ಹದಿಹರೆಯದವರೊಂದಿಗೆ ಸಂಪರ್ಕಕ್ಕೆ ಬಾರದಂತೆ ನಿಷೇಧಿಸಬೇಕು ಎಂದು ಸ್ಟ್ರೆಚ್ಟ್ ಹೇಳಿದ್ದಾರೆ.

ಆಯೋಗದ ಈ ವರದಿಯು ಇಡೀಯ ಸಮಾಜಕ್ಕೆ ಆಘಾತವುಂಟುಮಾಡಿದೆ ಎಂದು ಪೋರ್ಚುಗೀಸ್ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಹೇಳಿದ್ದಾರೆ. ಈ ಸಂಬಂಧ ಅಧಿಕಾರಿಗಳು ಹಾಗು ಸಚಿವರು ಆಯೋಗದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ಘೋಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!