Tuesday, March 21, 2023

Latest Posts

ಶಾಲೆಯಲ್ಲಿ ನಿದ್ರೆಗೆ ಜಾರಿದ ಏಳರ ಬಾಲಕ : 7 ಗಂಟೆಗಳ ಕಾಲ ಶಾಲೆಯಲ್ಲೇ ಲಾಕ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವಿದ್ಯಾರ್ಥಿಯೋರ್ವ ತನ್ನ ತರಗತಿಯಲ್ಲಿರುವಾಗಲೇ ನಿದ್ರೆಗೆ ಜಾರಿದ್ದಾನೆ, ಹೀಗಾಗಿ ಸುಮಾರು ಏಳು ಗಂಟೆಗಳ ಕಾಲ ಆತ ಶಾಲೆಯಲ್ಲೇ ಬಂಧಿಯಾಗಿರುವ ಘಟನೆ ಉತ್ತರಪ್ರದೇಶದ ಗೋರಖ್‌ಪುರ ಜಿಲ್ಲೆಯ ಚಾರ್ಗವಾನ್ ಬ್ಲಾಕ್‌ನ ಪರಮೇಶ್ವರಪುರದಲ್ಲಿ ನಡೆದಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಏಳು ವರ್ಷದ ಮಗು ಶಾಲೆ ಮುಗಿದ ಬಳಿಕ ಮನೆಗೆ ಬಾರದೇ ಇದ್ದುದನ್ನು ಕಂಡು ಆತನ ಪೋಷಕರು ಶಾಲೆಗೆ ಬಂದು ಹುಡುಕಾಡಿದ್ದಾರೆ. ತದನಂತರ ಪೊಲೀಸರಿಗೂ ಮಾಹಿತಿಯನ್ನು ನೀಡಿದ್ದಾರೆ.

ಮಗುವನ್ನು ಹುಡುಕುತ್ತಿರುವಾಗ ಪೊಲೀಸರು ಸಹ ಶಾಲೆಗೆ ಭೇಟಿ ನೀಡಿದ್ದಾರೆ, ಈ ವೇಳೆ ಶಾಲೆಯೊಳಗೆ ಮಗು ಅಳುವುದು ಕೇಳಿಸಿದೆ. ತದನಂತರ ಪೊಲೀಸರು ಶಾಲೆಯ ಬೀಗ ಒಡೆದು ಮಗುವನ್ನು ರಕ್ಷಿಸಿದ್ದಾರೆ.

ವರದಿಗಳ ಪ್ರಕಾರ, 7 ವರ್ಷದ ಬಾಲಕ ತನ್ನ ತರಗತಿಯಲ್ಲಿ ನಿದ್ರೆಗೆ ಜಾರಿದ್ದಾನೆ, ಅದನ್ನು ಗಮನಿಸದ ಸಿಬ್ಬಂದಿ ಶಾಲೆಗೆ ಬೀಗ ಹಾಕಿ ಮನೆಗೆ ನಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!