Monday, September 26, 2022

Latest Posts

ದೇವಾಲಯದ 20ಕ್ಕೂ ಅಧಿಕ ಗಂಟೆಗಳು ಕಳವು!

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯ ದೇವಾಲಯಗಳಲ್ಲಿ ಕಳವು ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು,‌ ಭಾನುವಾರ ನಾಪೋಕ್ಲುವಿನ ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಮಕ್ಕಿ ಶಾಸ್ತಾವು ದೇವಾಲಯದಲ್ಲಿದ್ದ 20ಕ್ಕೂ ಹೆಚ್ಚು ತಾಮ್ರದ ಘಂಟೆಗಳನ್ನು ಕಳವು ಮಾಡಲಾಗಿದೆ.
ದೇವಾಲಯದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ನಾಶಪಡಿಸಿ ಘಂಟೆಗಳನ್ನು ಕಳವು ಮಾಡಲಾಗಿದೆ. ಗಂಟೆಗಳು 5ರಿಂದ‌ 13ಕೆ.ಜಿ.ವರೆಗಿನ ತೂಕದವುಗಳು ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟಿರ ಶ್ಯಾಂ ಬೋಪಣ್ಣ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಕಳ್ಳರನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇತ್ತೀಚೆಗಷ್ಟೇ ಚೇರಂಬಾಣೆ ಸಮೀಪದ ಪಾಕ ದೇವಸ್ಥಾನದ ಹುಂಡಿ ಒಡೆದು ಹಣ ದೋಚಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!