ಜಾತ್ರಾ ಮಹೋತ್ಸವದಲ್ಲಿ ನೂಕುನುಗ್ಗಲು: 30ಕ್ಕೂ ಹೆಚ್ಚು ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾತ್ರಾ ಮಹೋತ್ಸವದಲ್ಲಿ ನೂಕುನುಗ್ಗಲಾಗಿ 30 ಜನರು ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ 35 ವರ್ಷಗಳ ಬಳಿಕ ರಾಮಲಿಂಗೇಶ್ವರ ಮತ್ತು ಚೌಡೇಶ್ವರಿ ಜಾತ್ರಾ ಮಹೋತ್ಸವ ನಡೆದಿದೆ. ಜಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಹರಕೆ ನಿಮಿತ್ತ ಕೆಂಡದ ಕುಂಡ ನಿರ್ಮಿಸಲಾಗಿತ್ತು. ಕೆಂಡ ಹಾಯುವ ವೇಳೆ ನೂಕುನುಗ್ಗಲಾಗಿ ಕೆಳೆಗೆ ಬಿದ್ದು 30 ಜನ ಗಾಯೊಂಡಿದ್ದಾರೆ. ಈ ವೇಳೆ ಗ್ರಾಮಸ್ಥರು ದೇವರನ್ನ ಬಿಟ್ಟು ಓಡಿಹೋಗಿದ್ದಾರೆ.

ಗಾಯಾಳುಗಳನ್ನು ತುರುವೇಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!