ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರಿಗೇ ಆಗಲಿ ಪ್ರೀತಿಸುವ ಸಂಗಾತಿಯನ್ನು ಕಳೆದುಕೊಳ್ಳುವುದು ಜೀವನವಿಡೀ ಕಳೆಯದ ನೋವು. ಇಂದು ಚಿರು ಸರ್ಜಾ ಪುಣ್ಯತಿಥಿಯಾಗಿದ್ದು, ಮೇಘನಾ ರಾಜ್ ತಮ್ಮ ಪತಿಗಾಗಿ ಭಾವುಕ ಸಂದೇಶವನ್ನು ಬರೆದಿದ್ದಾರೆ.
ಮಗ ಹುಟ್ಟಲು ಕೆಲವೇ ತಿಂಗಳುಗಳು ಬಾಕಿ ಎನ್ನುವಂತೆ ಚಿರು ಇಹಲೋಕ ತ್ಯಜಿಸಿದ್ದರು, ಮೇಘನಾ ರಾಜ್ ಪರಿಸ್ಥಿತಿ ನೆನೆದು ಇಡೀ ರಾಜ್ಯವೇ ಕಣ್ಣೀರಿಟ್ಟಿತ್ತು.
ಧ್ರುವ ಸರ್ಜಾ ಫಾರ್ಮ್‌ಹೌಸ್‌ನಲ್ಲಿರುವ ಚಿರು ಸಮಾಧಿಗೆ ಇಡೀ ಕುಟುಂಬ ಭೇಟಿ ನೀಡಿದ್ದು, ಪುಷ್ಪಾರ್ಚನೆ ಮಾಡಿದೆ. ನನ್ನ ನಿನ್ನೆ ಇಂದು ಹಾಗೂ ನಾಳೆ ಎಲ್ಲವೂ ನೀನೇ ಚಿರು ಎಂದು ಮೇಘನಾ ಹೇಳಿಕೊಂಡಿದ್ದು, ಅಭಿಮಾನಿಗಳ ಕಣ್ಣಾಲೆ ಒದ್ದೆಯಾಗಿದೆ.