ಉಸ್ಸಪ್ಪಾ… ಈ ಮಹಿಳೆಯ ಮೂತ್ರಪಿಂಡದಲ್ಲಿ ಅಡಗಿತ್ತು ಬರೋಬ್ಬರಿ 300ಕ್ಕೂ ಹೆಚ್ಚು ಕಲ್ಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ ಎರಡು ತಾಸುಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ತೈವಾನ್‌ನ ಮಹಿಳೆಯೊಬ್ಬರ ಮೂತ್ರಪಿಂಡದಲ್ಲಿ ಅಡಗಿಕೊಂಡಿದ್ದ ಬರೋಬ್ಬರಿ 300 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಿ ಉಸ್ಸಪ್ಪಾ ಎಂದಿದ್ದಾರೆ!
ಅಸ್ವಸ್ಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಈ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ ಆಕೆ ಕೃತಕ ಸಿಹಿಕಾರಕಗಳನ್ನು ಬಳಸಿ ತಯಾರಿಸಿದ ಪಾನೀಯದ ಅತಿಯಾದ ಸೇವನೆಯಿಂದ ಅಸ್ವಸ್ಥತೆಗೆ ಒಳಗಾಗಿದ್ದು ಕಂಡುಬಂತು. ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನ್ ನಡೆಸಿದಾಗ ಆಕೆಯ ಬಲ ಕಿಡ್ನಿ ದ್ರವದಿಂದ ಊದಿಕೊಂಡಿದ್ದು ಅದರಲ್ಲಿ ನೂರಾರು ಕಲ್ಲುಗಳು ಇರುವುದು ಪತ್ತೆಯಾಗಿವೆ. ಈ ಕಲ್ಲುಗಳು ಕಲ್ಲುಗಳು ೫ ಎಂಎಂ ಮತ್ತು ೨ ಸೆಂ.ಮೀ ಗಾತ್ರಕ್ಕೆ ಬೆಳೆದಿದ್ದವು. ಇಷ್ಟಕ್ಕೂ ಇದಕ್ಕೆ ಕಾರಣವೇನು ಎಂದು ತಿಳಿಯಲು ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸಿದ್ದು, ಆಕೆಯನ್ನು ವಿಚಾರಣೆ ನಡೆಸಿದಾಗ ಆಕೆ ಒಂದು ಹನಿ ನೀರನ್ನೂ ಕುಡಿದಿಲ್ಲ ಎಂಬುದು ಗೊತ್ತಾಗಿದೆ. ನೀರಿನ ಬದಲು ಆಕೆ ಬಬಲ್ ಟೀ, ಫ್ರೂಟ್ ಜ್ಯೂಸ್ ಹಾಗೂ ಆಲ್ಕೋಹಾಲ್ ಹೊಂದಿರುವ ಪಾನೀಯಗಳನ್ನು ಸೇವಿಸುತ್ತಿದ್ದರು. ಇದೇ ಆಕೆಯ ಕಿಡ್ನಿಯಲ್ಲಿ ಇಷ್ಟೊಂದು ಕಲ್ಲುಗಳು ಸೇರಲು ಕಾರಣವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!