ಬೆಂಗಳೂರಿನಲ್ಲಿ ರಾಮಲಲಾನ ಪ್ರಾಣಪ್ರತಿಷ್ಠಾಪನೆ ದಿನವೇ 60ಕ್ಕೂ ಮಕ್ಕಳ ಜನನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ (Ramlalla pran pratishtha) ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶುಭ ಗಳಿಗೆಯಲ್ಲಿ ತಮ್ಮ ಕಂದಮ್ಮಗಳನ್ನು ಹೆರಲು ನಿರ್ಧರಿಸಿದಂತಿದೆ.

ಹೀಗಿರುವಾಗ ರಾಮಲಲಾ ಪ್ರತಿಷ್ಠಾಪನೆ ದಿನವೇ ರಾಜಧಾನಿಯಲ್ಲಿ 60ಕ್ಕೂ ಹೆಚ್ಚು ಕಂದಮ್ಮಗಳು ಜನ್ಮ ಪಡೆದುಕೊಂಡಿವೆ.
ಈ ಶುಭ ದಿನದಂದು ರಾಮನಂತಹ ಮಗು, ಸೀತೆಯಂತಹ ಮಗಳು ಪಡೆಯಲು ಸಿಟಿ ಪೋಷಕರು ಆಸಕ್ತಿ ವಹಿಸಿದ್ದಾರೆ. ಹಾಗಾಗಿ ಇದುವರೆಗೂ ರಾಜ್ಯದಲ್ಲಿ 40ಕ್ಕೂ ಹೆಚ್ಚು ಶಿಶುಗಳು ಜನಿಸಿವೆ.

ಯಾವ ಆಸ್ಪತ್ರೆಯಲ್ಲಿ ಎಷ್ಟು ಶಿಶುಗಳ ಜನನ
ವಾಣಿವಿಲಾಸ್ ಆಸ್ಪತ್ರೆಯಲ್ಲಿ 28 ಕಂದಮ್ಮಗಳು ಜನಿಸಿದ್ದು, ಈ ಪೈಕಿ 10 ನಾರ್ಮಲ್, 1 ಸಿಸೇರಿಯನ್ ಮಾಡಲಾಗಿದೆ. ಗಂಡು 16, ಹೆಣ್ಣು 12 ​
ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ತನಕ 4 ಶಿಶುಗಳ ಜನನವಾಗಿದ್ದು, ಈ ಪೈಕಿ 2 ಸಹಜ, 2 ಸಿಸೇರಿಯೆನ್​
ಘೋಷಾ ಆಸ್ಪತ್ರೆಯಲ್ಲಿ ಒಟ್ಟು 6 ಕಂದಮ್ಮಗಳ ಜನನ, 5 ನಾರ್ಮಲ್, 1 ಸಿಸೇರಿಯನ್​
ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 25 ಕ್ಕೂ ಅಧಿಕ ಮಕ್ಕಳ ಜನನವಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಮಾಹಿತಿ ನೀಡದಂತೆ ಪೋಷಕರು ತಾಕೀತು ಮಾಡಿದ್ದು, ಈ ಹಿನ್ನೆಲೆ ಡೆಲಿವರಿ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕಿದ್ದಾರೆ.

 

ಮನ ಹೊಸ ಮೂರ್ತಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!