ಮಾಸ್ಕೋ ನರಮೇಧ: ಸಾವಿನ ಸಂಖ್ಯೆ 110ಕ್ಕೆ ಏರಿಕೆ, ತನಿಖಾ ಏಜೆನ್ಸಿಗಳು ಸ್ಥಳದಲ್ಲಿಯೇ ಮೊಕ್ಕಾಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ರಾಜಧಾನಿ ಮಾಸ್ಕೋ ನಗರದಲ್ಲಿ ನಡೆದ ನರಮೇಧದಲ್ಲಿ ಸಾವನ್ನಪ್ಪಿದವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ಮಾಸ್ಕೋ ನಗರದ ಉತ್ತರ ಭಾಗದಲ್ಲಿರುವ ಕ್ರೋಕಸ್ ಸಿಟಿ ಹಾಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಕ್ ಮ್ಯೂಸಿಕ್ ನೈಟ್‌ಗೆ ದಾಳಿ ನಡೆಸಿದ ಉಗ್ರರು ಯರ್ರಾಬಿರ್ರಿ ಗುಂಡಿನ ದಾಳಿ ನಡೆಸಿದ್ದು, ಈ ಘಟನೆ ಈಗ ವಿಶ್ವದಲ್ಲಿಯೇ ಭಾರೀ ಆತಂಕ, ಚರ್ಚೆಗೆ ಕಾರಣವಾಗಿದೆ.

ಈ ಘಟನೆಯಲ್ಲಿ ಗಾಯಾಳುಗಳ ಸಂಖ್ಯೆ ಕೂಡಾ ನೂರನ್ನು ದಾಟಿದ್ದು, ತನಿಖಾ ಏಜೆನ್ಸಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ತನಿಖೆ ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಮಾಸ್ಕೋನಲ್ಲಿ ನಡೆದ ಈ ನರಮೇಧದ ಹಿಂದೆ ಇಸ್ಲಾಮಿಕ್ ಸ್ಟೇಟ್ ಪಾತ್ರವಿದೆ ಎಂದು ಯುನೈಟೆಡ್ ಸ್ಟೇಟ್ಸ್ ಗುಪ್ತಚರ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!