ಮಸೀದಿ-ಮಂದಿರ, ಪಠ್ಯ ಪುಸ್ತಕ ವಿವಾದ ಎಲ್ಲವೂ ಚುನಾವಣೆ ಗಿಮಿಕ್‌ :ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಚುನಾವಣೆ ಸಮೀಪಿಸುತ್ತಿರುವುದರಿಂದ ಮಸೀದಿ ಮಂದಿರ, ಪಠ್ಯ ಪುಸ್ತಕ ಸೇರಿದಂತೆ ಅನೇಕ ವಿಚಾರದ ವಿವಾದ ಸೃಷ್ಟಿಸುತ್ತಿದ್ದಾರೆ. ಇದು ಚುನಾವಣೆ ಗಿಮಿಕ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಬಿಜೆಪಿ ಸರ್ಕಾರ ಬಡವರಿಗಾಗಿ ಯಾವುದೇ ಕೆಲಸ ಮಾಡಿದರು ಸಹ ವಿರೋಧ ಪಕ್ಷಗಳು ವಿವಾದ ಸೃಷ್ಟಿಸುತ್ತಾರೆ. ಇನ್ನು ಪಠ್ಯ ಪುಸ್ತಕವೇ ಹೊರಗೆ ಬಂದಿಲ್ಲ ಭಗತ್‌ಸಿಂಗ್, ನಾರಾಯಣ ಗುರು ವಿಷಯ ಇಟ್ಟುಕೊಂಡು ವಿವಾದ ಸೃಷ್ಟಿಸುವ ಹೇಳಿಕೆ ವಿರೋಧ ಪಕ್ಷದವರು ನೀಡುತ್ತಿದ್ದಾರೆ ಎಂದರು.

ಪಠ್ಯ ಪುಸ್ತಕದ ಕಮಿಟಿ ಪುಸ್ತಕದಲ್ಲಿರುವುದನ್ನು ನೋಡಲು ಆಹ್ವಾನಿಸಿದ್ದಾರೆ. ಆದರೆ ಯಾರು ನೋಡಲಾರದೆ ಹಲವರ ವಿಷಯ ಕೈಬಿಟ್ಟಿದ್ದಾರೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿಯ ವಿಚಾರಧಾರೆ ಮತ್ತು ತತ್ವಗಳನ್ನು ಜನರು ಒಪ್ಪುತ್ತಿದ್ದಾರೆ. ಈ ರೀತಿ ದೇಶದ ಮಹನೀಯರ ಹೆಸರು ಬಳಸಿಕೊಂಡು ಕೆಲವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!