Monday, September 25, 2023

Latest Posts

ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಟಾರ್ಟ್-ಅಪ್‌ಗಳು ಪ್ರಧಾನಿ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಭಾರತಾದ್ಯಂತ ಜನವರಿ 16 ಸ್ಟಾರ್ಟ್-ಅಪ್ ದಿನವಾಗಿ ಆಚರಣೆಯಾಗಬೇಕೆಂದು ಘೋಷಣೆ ಮಾಡಿದ್ದಾರೆ. ಪ್ರಧಾನಿಯವರು 2016ರಲ್ಲಿ ಸ್ಟಾರ್ಟ್-ಅಪ್‌ಗೆ ಭಾರೀ ಬೆಂಬಲ ಕೊಟ್ಟಿದ್ದು, ಭಾರತದಲ್ಲಿ 500ರಷ್ಟಿದ್ದ ಸ್ಟಾರ್ಟ್-ಅಪ್‌ಗಳು ಇವತ್ತು 54ಸಾವಿರಕ್ಕೇರಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆನ್‌ಲೈನ್ ವೀಡಿಯೋ ಸಂದೇಶ ನೀಡಿರುವ ಸಿಎಂ, ಸ್ಟಾರ್ಟ್-ಅಪ್‌ನ ಯಶಸ್ಸಿನ ರೂವಾರಿಗಳಾದ ಪ್ರಧಾನಿಯವರು ಕರ್ನಾಟಕದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಈ ಸ್ಟಾರ್ಟ್-ಅಪ್‌ಗಳು ಸರಕಾರದ ಕಟ್ಟುಪಾಡುಗಳಿಂದ ಮುಕ್ತವಾಗಿ ನವೋದ್ಯಮ ಮತ್ತು ಉದ್ಯಮಶೀಲತೆ ಸ್ವತಂತ್ರವಾಗಿ ಕೆಲಸ ಮಾಡಲು, ಸರಕಾರಗಳು ಸಂಸ್ಥೆಯ ರೂಪದಲ್ಲಿ ಸಹಾಯ ಮಾಡಬೇಕೆಂದು ಪ್ರಧಾನಿಯವರು ವೇದಿಕೆಯನ್ನು ಸೃಷ್ಟಿಸಿದ್ದಾರೆ. ಈ ಎಲ್ಲ ಸ್ಟಾರ್ಟ್-ಅಪ್‌ಗಳಿಗೆ ಸರಕಾರಗಳು ಸಹಾಯಹಸ್ತವನ್ನು ಚಾಚಲು ಸೂಚಿಸಿದ್ದಾರೆ. ದೇಶದ 54ಸಾವಿರ ಸ್ಟಾರ್ಟ್ ಅಪ್‌ಗಳಲ್ಲಿ 13ಸಾವಿರ ಸ್ಟಾರ್ಟ್-ಅಪ್‌ಗಳು ಕರ್ನಾಟಕದಲ್ಲಿ ಪ್ರಾರಂಭವಾಗಿರುವುದು ಹೆಮ್ಮೆಯ ವಿಚಾರ. ಈ ಸ್ಟಾರ್ಟ್-ಅಪ್‌ಗಳ ಯುವ ಜನತೆಯ ಪರವಾಗಿ ಪ್ರಧಾನಿಯವರಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸುವುದಾಗಿ ಸಿಎಂ ತಿಳಿಸಿದ್ದಾರೆ.

ಕರ್ನಾಟಕ ಸಾಫ್ಟ್‌ವೇರ್, ಐಟಿಬಿಟಿಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಎಂಬತ್ತರ ದಶಕದಲ್ಲಿ ಸಾಫ್ಟ್‌ವೇರ್ ಕಂಪನಿ ಮೊದಲು ಶುರುವಾಗಿದ್ದು ಕರ್ನಾಟಕದಲ್ಲಿ. ಅಲ್ಲಿಂದ ಕರ್ನಾಟಕ ದೊಡ್ಡ ಪ್ರಮಾಣದಲ್ಲಿ ಐಟಿ ಬಿಟಿಯಲ್ಲಿ ಬೆಳೆದಿದೆ. ದೇಶದ ಅತೀ ಹೆಚ್ಚು ಐಟಿ ಬಿಟಿ ಸಾಫ್ಟ್‌ವೇರ್‌ಗಳ ರಫ್ತು ಕರ್ನಾಟಕದಿಂದ ನಡೆಯುತ್ತಿದೆ. ಹೀಗಾಗಿ ಕರ್ನಾಟಕ ಭವಿಷ್ಯದ ಆರ್ಥಿಕತೆಯಲ್ಲಿ ದೊಡ್ಡ ಪಾತ್ರ ವಹಿಸುವುದಲ್ಲಿ ಸಂಶಯವಿಲ್ಲ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಟಾರ್ಟ್-ಅಪ್‌ಗಳ ಉತ್ತೇಜನಕ್ಕೆ ಸಿಎಂ ವಿವರಿಸಿದ ವಿವಿಧ ಕ್ರಮಗಳು:

* ಸ್ಟಾರ್ಟ್-ಅಪ್‌ಗಳಿಗೆ ಎಲ್ಲ ರೀತಿಯ ಮಾರ್ಗದರ್ಶನ ಮತ್ತು ವೈಜ್ಞಾನಿಕ ಬೆಂಬಲ ನೀಡುವ ಕೆಲಸ ಮಾಡಿದೆ.

* ಸ್ಟಾರ್ಟ್-ಅಪ್ ಸೆಲ್ ಸ್ಥಾಪಿಸಿ, ಅದರ ಮೂಲಕ ಆಸಕ್ತರಿಗೆ ಸಂಪೂರ್ಣ ಮಾರ್ಗದರ್ಶನ ನೀಡಲಾಗುತ್ತಿದೆ.

* ಸ್ಟಾರ್ಟ್-ಅಪ್ ಮಾಡುವವರಿಗೆ ಅಗತ್ಯ ಆರ್ಥಿಕ ನೆರವು ನೀಡಲು ಎಲಿವೇಟ್ 100, ಎಲಿವೇಟ್ ಉನ್ನತಿ, ಎಲಿವೇಟ್ 75, ಎಲಿವೇಟ್ 25 ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

* ಇಲ್ಲಿಯವರೆಗೆ 482 ಸ್ಟಾರ್ಟ್-ಅಪ್‌ಗಳಿಗೆ ₹ 120 ಕೋಟಿ ಸರಕಾರ ನೆರವು ನೀಡಿದೆ.

* ಪ್ರಧಾನಮಂತ್ರಿಗಳ ದೂರದೃಷ್ಟಿಯ ನವೋದ್ಯಮ ಆರ್ಥಿಕತೆಗೆ ಭವಿಷ್ಯದಲ್ಲಿ ಇಡೀ ಕರ್ನಾಟಕದಲ್ಲಿ ಐಟಿ ಬಿಟಿ, ಕೈಗಾರಿಕೆಗಳು ಪ್ರಾರಂಭವಾಗಬೇಕೆಂಬ ಚಿಂತನೆ ಇದೆ.

* ನವೀನ ಚಿಂತನೆ, ಆವಿಷ್ಕಾರ ಮತ್ತು ಉದ್ಯಮಶೀಲತೆಗೆ ಉತ್ತೇಜನ ಕೊಡಲು ಶಾಲೆಗಳ ಪಠ್ಯಪುಸ್ತಕದಲ್ಲಿ ಮುಂದಿನ ವರ್ಷದಿಂದ ಈ ವಿಷಯ ಸೇರ್ಪಡೆಗೆ ತೀರ್ಮಾನ.

* 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ, ಭವಿಷ್ಯದಲ್ಲಿ ಡಿಪ್ಲೊಮಾ ಕಾಲೇಜುಗಳನ್ನು ಉನ್ನತೀಕರಿಸುವ ಯೋಜನೆ ರೂಪಿಸಲಾಗುತ್ತದೆ.

* ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮ ಸೇರಿದಂತೆ ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವ ಎಲ್ಲ ರಂಗದಲ್ಲಿ ಸ್ಟಾರ್ಟ್-ಅಪ್‌ಗಳು ಬರಬೇಕು, ಹೊಸ ಕ್ರಾಂತಿಯಾಗಬೇಕು.

* ಸಾಮಾಜಿಕ ಜವಾಬ್ದಾರಿಯನ್ನು ಇಟ್ಟುಕೊಂಡು ಶಿಕ್ಷಣ, ಸಮಾಜಕಲ್ಯಾಣ, ಆರೋಗ್ಯ ಕ್ಷೇತ್ರದಲ್ಲಿನ ಸ್ಟಾರ್ಟ್-ಅಪ್‌ಗಳಿಗೂ ಹೆಚ್ಚಿನ ಉತ್ತೇಜನ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!