ತಾಯಿಗೂ ಬೇಕು ವಿರಾಮ, ಮಾನಸಿಕ, ದೈಹಿಕ ಆರೋಗ್ಯ ಹೀಗೆ ಕಾಪಾಡಿ..

ಯಾವುದೇ ಮಹಿಳೆ ತಾಯಿಯಾಗಿ ಬದಲಾದಾಗ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಜವಾಬ್ದಾರಿ, ನಿಂದನೆ, ಕಟ್ಟುಪಾಡು ಎಲ್ಲಕ್ಕೂ ಆಕೆ ಹೊಂದಿಕೊಳ್ಳುತ್ತಾಳೆ. ಬಾಣಂತಿಯಾಗಿದ್ದಾಗ ಆಕೆ ತನ್ನ ಬಗ್ಗೆ ಆಲೋಚಿಸದೆ ಮಗುವಿನ ಆರೈಕೆಯಲ್ಲಿ ತೊಡಗುತ್ತಾಳೆ. ತಾಯಿಗೂ ರೆಸ್ಟ್ ಬೇಕು. ಆರೋಗ್ಯಕ್ಕೆ ಈ ರೀತಿ ಮಾಡಿ..

  • ಸುಸ್ತು, ಒತ್ತಡದಿಂದ ಹೊರಬರೋಕೆ ಸಾಕಷ್ಟು ರೆಸ್ಟ್ ಮಾಡಿ.
  • ಸಹಾಯ ಕೇಳಿ, ನನ್ನ ಕೆಲಸ ನಾನೇ ಮಾಡುತ್ತೇನೆ ಎನ್ನಬೇಡಿ, ಕೈಲಾಗದ್ದಕ್ಕೆ ಸಹಾಯ ಕೋರಿ
  • ಆರೋಗ್ಯಕರ ಆಹಾರ ಸೇವನೆ ಮಾಡಿ, ಈ ಸಮಯ ತುಂಬಾ ಸೂಕ್ಷ್ಮ
  • ವ್ಯಾಯಾಮಕ್ಕೆ ಬೇಡ ಅನ್ನಬೇಡಿ, ವೈದ್ಯರ ಸಲಹೆ ಆಧರಿಸಿ ವ್ಯಾಯಾಮ ಮಾಡಿ.
  • ಕಣ್ತುಂಬ ಚೆನ್ನಾಗಿ ನಿದ್ದೆ ಮಾಡಿ
  • ನಿಮ್ಮ ದೇಹದ ಬಗ್ಗೆ ಗಮನ ಇರಲಿ, ಅದು ಏನು ಹೇಳುತ್ತದೋ ಹಾಗೆ ಮಾಡಿ.
  • ಮಗುವಿನ ಆರೈಕೆ ಬಗ್ಗೆ ನೆಗೆಟಿವ್ ಮಾತುಗಳಿಗೆ ಕಿವಿಕೊಡಬೇಡಿ
  • ಸಂಗಾತಿ ಪಕ್ಕದಲ್ಲೇ ಇರಲಿ
  • ಅನುಕೂಲ ನೋಡಿಕೊಂಡು ಹೊರಗೆ ಹೋಗಿಬನ್ನಿ
  • ಹಾರ್ಮೋನ್‌ಗಳ ವ್ಯತ್ಯಾಸ ಹೆಚ್ಚಿರುವ ಕಾರಣ, ಮಾನಸಿಕ ಆರೋಗ್ಯದ ಬಗ್ಗೆ ಗಮನ ಇರಲಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!