ಈ ರಾಶಿಯವರ ಬುದ್ಧಿಮತ್ತೆ ಸೂರ್ಯನಂತೆ ಪ್ರಖರ! ಕೃತಿಕ ರಾಶಿ ಬಗೆಗಿನ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವೈದಿಕ ಜ್ಯೋತಿಷ್ಯ ಶಾಸ್ತ್ರ ದ ಪ್ರಕಾರ ಹಿಂದೂ ಧರ್ಮದಲ್ಲಿ ಒಟ್ಟು ಇಪ್ಪತ್ತೇಳು ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರವನ್ನು ಕೆಲವು ಗ್ರಹಗಳು ಆಳುತ್ತವೆ. ಈ ಗ್ರಹಗಳ ಪ್ರಭಾವ ಹಾಗೂ ಅವುಗಳ ಅಧಿಪತಿಯ ಅನುಸಾರ ವ್ಯಕ್ತಿಯ ವರ್ತನೆಗಳನ್ನು ನಿರ್ಣಯಿಸಲಾಗುತ್ತದೆ. ಕೃತಿಕಾ ನಕ್ಷತ್ರಕ್ಕೆ ನಕ್ಷತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನವಿದೆ. ಈ ನಕ್ಷತ್ರದಲ್ಲಿ ಜನಿಸಿದವರು ವೃಷಭ ರಾಶಿಯನ್ನು ಹೊಂದಿರುತ್ತಾರೆ. ಕೃತಿಕಾ ನಕ್ಷತ್ರವು ಶಿವನ ಮಗನಾದ ಕಾರ್ತಿಕೇಯನನ್ನು ಹೋಲುವುದು. ಈ ನಕ್ಷತ್ರದ ಅಧಿಪತಿ ಸೂರ್ಯ. ಹಾಗಾಗಿ ಕೃತಿಕಾ ನಕ್ಷತ್ರದಲ್ಲಿ ಜನಿಸಿದವರ ಬುದ್ಧಿ ತೀಕ್ಷ್ಣ ವಾಗಿರುತ್ತದೆ ಎನ್ನಲಾಗುತ್ತದೆ. ಬುದ್ಧಿವಂತರು ಎನಿಸಿಕೊಂಡಿರುತ್ತಾರೆ. ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಸ್ವಾಭಿಮಾನಿಗಳಾಗಿರುತ್ತಾರೆ. ಇವರು ಯಾರ ಒತ್ತಡಕ್ಕೂ ಮಣಿಯಲಾರರು. ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಾರೆ. ನಕಾರಾತ್ಮಕ ಚಿಂತನೆಗಳಿಂದ ಸಮೃದ್ಧರಾಗಿರುತ್ತಾರೆ.
ಈ ನಕ್ಷತ್ರದಲ್ಲಿ ಜನಿಸಿದವರು ಪ್ರಯಾಣ ಮಾಡಲು, ಸದಾ ಸುತ್ತುತ್ತಿರಲು ಬಯಸುತ್ತಿರುತ್ತಾರೆ. ಕ್ರೀಡೆಗಳಲ್ಲಿಯೂ ಹೊರಾಂಗಣ ಕ್ರೀಡೆಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಇವರು ಸಂಪ್ರದಾಯ ಹಾಗೂ ಸಂಸ್ಕತಿಯ ಬದ್ಧ ಪರಿಪಾಲಕರು. ವಾತ ಮತ್ತು ಪಿತ್ತ ಜಾಸ್ತಿಯಿರುವುದರಿಂದ ಈ ರಾಶಿಯವರು ಆರೋಗ್ಯದ ಬಗ್ಗೆ ಮಾತ್ರ ಹೆಚ್ಚು ಜಾಗೃತರಾಗಿ ಇರಬೇಕು.
ಈ ನಕ್ಷತ್ರದಡಿಯಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ಇನ್ನಷ್ಟು ಈ ಕೆಳಗಿನ ವಿಡಿಯೋವನ್ನು ಪರಿಶೀಲಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!