ಬದುಕಿರುವಾಗಲೇ 3ವರ್ಷದ ಮಗಳನ್ನು ಸ್ಮಶಾನದಲ್ಲಿ ಹೂತು ಹಾಕಿದ ತಾಯಿ: ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾನು ಹೊತ್ತು ಹೆತ್ತ ಮಗಳನ್ನೇ ತಾಯಿ ಸ್ಮಶಾನದಲ್ಲಿ ಹೂತು ಹಾಕಿರುವ ಭಯಾನಕ ಘಟನೆ ಬಿಹಾರದಲ್ಲಿ ನಡೆದಿದೆ. ಮೂರು ವರ್ಷದ ಬಾಲಕಿಯನ್ನು ಸ್ಮಶಾನದಲ್ಲಿ ಹೂತು ಅಂತ್ಯಸಂಸ್ಕಾರ ಮಾಡಲು ತಾಯಿ ಮತ್ತು ಅಜ್ಜಿ ಯತ್ನಿಸಿದ್ದಾರೆ. ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದು ಬಾಲಕಿಯನ್ನು ರಕ್ಷಿಸಿ, ವಿಹಾರ್‌ನ ಸರನ್ ಜಿಲ್ಲೆಯ ಕೊಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲಾಲಿ ಎಂಬ ಮೂರು ವರ್ಷದ ಬಾಲಕಿಯನ್ನು ಆಕೆಯ ತಾಯಿ ಮತ್ತು ಅಜ್ಜಿ ಜೀವಂತವಾಗಿ ಕೊಲ್ಲಲು ಯತ್ನಿಸಿದ್ದಾರೆ. ಬಾಲಕಿಯ ಬಾಯಲ್ಲಿ ಮಣ್ಣು ತುರುಕಿ ಸ್ಮಶಾನಕ್ಕೆ ಕರೆದೊಯ್ದು, ಹೂತುಹಾಕಲು ಪ್ರಯತ್ನಿಸಿದ್ದಾರೆ. ಸ್ಮಶಾನದಿಂದ ಕೇಳಿಬಂದ ಕಿರುಚಾಟ ಶಬ್ದದಿಂದ ಬೆಚ್ಚಿಬಿದ್ದ ಜನ ದೆವ್ವ ಇರಬಹುದು ಎಂದು ಭಾವಿಸಿ ಭಯದಿಂದಲೇ ಅತ್ತಕಡೆ ಹೆಜ್ಜೆ ಹಾಕಿದ್ದಾರೆ. ಘಟನೆ ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು ಮಣ್ಣನ್ನು ಹೊರತೆಗೆದು ಬಾಲಕಿಯನ್ನು ರಕ್ಷಿಸಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ತನ್ನ ತೊದಲು ನುಡಿಯಿಂದಲೇ ಬಾಲಕಿ ತನ್ನ ತಂದೆಯ ರಾಜು ಶರ್ಮಾ ಮತ್ತು ತಾಯಿಯ ಹೆಸರು ರೇಖಾ ದೇವಿ ಎಂದು ಹೇಳಿದ್ದಾಳೆ. ಅಜ್ಜಿ ಮತ್ತು ತಾಯಿ ತಿಂಡಿ ಕೊಡಿಸುವುದಾಗಿ ಕರೆತಂದಿದ್ದಾಗಿ ಮಗು ಹೇಳಿದೆ. ಇದೀಗ ಬಾಲಕಿಯ ಕುಟುಂಬದ ಸದಸ್ಯರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!