ಒಂದು ವರ್ಷದ ಮಗುವಿನ ಎದುರೇ ಜೋಲಿಗೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಸಿಎಂಸಿ ಬಡಾವಣೆಯಲ್ಲಿ ನಡೆದಿದೆ.

ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 23 ವರ್ಷ ಎಸ್. ಝಾನ್ಸಿ ಮೃತ ಗೃಹಿಣಿ. ಗಂಡ ಈಶ್ವರ್ ಮನೆಗೆ ಊಟಕ್ಕೆ ಬಂದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಗಂಡ ಕ್ರೇನ್ ವಾಹನದ ಅಪರೇಟರ್ ಹಾಗೂ ಮಾಲೀಕನಾಗಿದ್ದು ಮನೆಗೆ ಬಂದಾಗ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ದುರಂತ ಅಂದ್ರೆ ಮಹಿಳೆಗೆ 1 ವರ್ಷ 2 ತಿಂಗಳ ಹೆಣ್ಣು ಮಗುವಿದ್ದು ಮಗುವಿನ ಮುಂದೆಯೇ ತಾಯಿ ಸಾವಿನ ಮನೆ ಸೇರಿದ್ದಾಳೆ. ಮಗುವಿನ ಎದುರೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮನೆಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು. ಗಂಡ ಹೆಂಡತಿ ಇಬ್ಬರು ಚೆನ್ನಾಗಿ ಇದ್ದರು. ಇಬ್ಬರ ನಡುವೆ ಯಾವುದೇ ಸಂಸಾರ ಕಲಹಗಳು ಇರಲಿಲ್ಲವೆಂದು ಮೃತಳ ಸಂಬಂಧಿಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!