Thursday, October 6, 2022

Latest Posts

ವಿಷ ಸೇವಿಸಿ ತಾಯಿ ಸಾವು: ಚಿಂತಾಜನಕದಲ್ಲಿ ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವಿಷ ಪದಾರ್ಥ ಸೇವಿಸಿದ ತಾಯಿ, ಮಗ ಸ್ನಾನಗೃಹದಲ್ಲಿ ಕುಸಿದುಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ನರಿಕೊಂಬು ಗ್ರಾಮದಲ್ಲಿ ನಡೆದಿದ್ದು, ಇವರ ಪೈಕಿ ತಾಯಿ ಗಿರಿಜಾ (62) ಸಾವನ್ನಪ್ಪಿದ್ದಾರೆ. ಅವರ ಪುತ್ರ ರಾಮಚಂದ್ರ (40) ಮಂಗಳೂರಿನ ವೆನ್ಲಾಕ್ ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿರಿಜಾ ಅವರಿಗೆ ಮೂವರು ಗಂಡುಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ. ಅವರ ಪತಿ ನಿಧನ ಹೊಂದಿದ್ದಾರೆ. ಮೂವರು ಗಂಡುಮಕ್ಕಳೂ ವಿವಿಧ ರೀತಿಯ ಅಂಗವೈಕಲ್ಯ ಹೊಂದಿದ್ದಾರೆ. ಅವರಲ್ಲಿ ಓರ್ವ ಬುದ್ಧಿಮಾಂದ್ಯದವನಾಗಿದ್ದು, ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆ ಈ ಕೃತ್ಯ ಎಸಗಿರಬಹುದು ಎಂದು ಸಂಶಯಿಸಲಾಗಿದೆ.
ಸಂಬಂಧಿಕರ ಮನೆಯಲ್ಲಿ ಇವರು ವಾಸವಾಗಿದ್ದು, ಬಾತ್ ರೂಮ್ ನಲ್ಲಿ ತಾಯಿ ಮತ್ತು ಮಗ ಕುಸಿದುಬಿದ್ದಿರುವುದನ್ನು ಕಂಡ ಸಂಬಂಧಿ ಉಮಾನಾಥ ಎಂಬವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!