ಚಿತ್ರದುರ್ಗದಲ್ಲಿ ಅತ್ತೆ ಸೊಸೆಯರು ಡಿಚ್ಚಿ ಹೊಡೆಯೋ ಹಬ್ಬ! ಏನಿದು ವಿಶಿಷ್ಟ ಆಚರಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದಲ್ಲಿ ಅತ್ತೆ ಸೊಸೆಯರು ತಲೆಗೆ ಡಿಕ್ಕಿ ಕೊಟ್ಟುಕೊಳ್ಳುವ ವಿಶಿಷ್ಠ ಆಚರಣೆಯೊಂದು ರಾಜ್ಯದ ಗಮನ ಸೆಳೆದಿದೆ.

ಚಳ್ಳಕೆರೆಯ ನನ್ನಿವಾಳ ಗ್ರಾಮದಲ್ಲಿ ಅತ್ತೆ ಸೊಸೆಯರ ಡಿಕ್ಕಿ ಹಬ್ಬವನ್ನು ಖುಷಿಯಿಂದ ಆಚರಿಸಲಾಗಿದೆ.

ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ಸಾಂಪ್ರದಾಯಕ ಆಚರಣೆ ಇದಾಗಿದೆ, ಇವರ ಆರಾಧ್ಯ ದೈವ ಗಾದ್ರಿಪಾಲನಾಯಕ ಹುಲಿ ಜೊತೆ ಸೆಣೆಸಾಡಿದ್ದರಂತೆ.

ಸೆಣೆಸಾಟದ ಸ್ಮರಣಾರ್ಥ ಈ ಡಿಕ್ಕಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದೇವರಿಗೆ ತೆಂಗಿನಕಾಯಿಯನ್ನು ಒಡೆಯುವುದಿಲ್ಲ. ಬದಲಿಗೆ ತಲೆಯನ್ನು ತೆಂಗಿನಕಾಯಿಯಂತೆ ಭಾವಿಸಿ ಅತ್ತೆ ಸೊಸೆಯಂದಿರು ತಲೆಗೆ ಡಿಚ್ಚಿ ಹೊಡೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!