ತಾಯಿ ಸ್ವರ್ಗದಿಂದಲೇ ನರೇಂದ್ರಭಾಯಿಗೆ ಆಶೀರ್ವಾದ ಮಾಡುತ್ತಿರಬಹುದು: ಮೋದಿ ಸಹೋದರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಧಾನಿ ಮೋದಿಯವರ (Narendra Modi) ಹಿರಿಯ ಸಹೋದರ ಸೋಮಾಭಾಯಿ ಮೋದಿಯವರು ಮತದಾನದ ಬಳಿಕ ತಮ್ಮ ತಾಯಿ ದಿವಂಗತ ಹೀರಾಬೆನ್ ಅವರನ್ನು ಸ್ಮರಿಸಿ ಭಾವುಕರಾಗಿದ್ದಾರೆ.

ಸೋಮಾಭಾಯಿ ಮೋದಿ ಅವರು ರಾನಿಪ್‍ನ ಮತಗಟ್ಟೆಯ ಹೊರಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡರು. ಬಳಿಕ ಸೋಮಾಭಾಯಿಯವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ತಮ್ಮ ತಾಯಿಯನ್ನು ನೆನೆದು ಭಾವುಕರಾದರು.

ಈ ವೇಳೆ, ನನ್ನ ತಾಯಿ ಈಗ ಇಲ್ಲ, ಆದರೆ ಅವರು ನರೇಂದ್ರಭಾಯಿ ಅವರಿಗೆ ಸ್ವರ್ಗದಿಂದಲೇ ಆಶೀರ್ವಾದ ಮಾಡುತ್ತಿರಬಹುದು ಎಂದರು.

ಮೋದಿಯವರು ಹಿಂದೆ ಮತದಾನಕ್ಕೂ ಮುನ್ನ ಗುಜರಾತ್‍ನ (Gujarat) ಗಾಂಧಿನಗರದಲ್ಲಿರುವ (Gandhinagar) ಅವರ ನಿವಾಸದಲ್ಲಿ ತಮ್ಮ ತಾಯಿಯನ್ನು ಭೇಟಿಯಾಗುತ್ತಿದ್ದರು. ತಾಯಿಯವರ ಆಶೀರ್ವಾದ ಪಡೆದು ಮತ ಚಲಾಯಿಸುತ್ತಿದ್ದರು.

ದೇಶದ ಜನ ನನ್ನ ಸಹೋದರ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂದು ಬಯಸುತ್ತಾರೆ. ಅವರಂತೆ ನಾನು ಸಹ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ ಎಂದರು.

ಮೋದಿಯವರ ತಾಯಿ ಹೀರಾಬೆನ್ ಅವರು 2022ರ ಡಿಸೆಂಬರ್ ತಿಂಗಳಲ್ಲಿ ನಿಧನರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!