ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ವೆಸ್ಟ್ ಇಂಡೀಸ್ ಆಟಗಾರ ಐದು ವರ್ಷ ಬ್ಯಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವೆಸ್ಟ್ ಇಂಡೀಸ್ ಕ್ರಿಕೆಟಿಗ ಡೆವೊನ್ ಥಾಮಸ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC Ban) ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ಐದು ವರ್ಷಗಳ ನಿಷೇಧ ಹೇರಿದೆ.

ಕೆಲವು ಪ್ರಮುಖ ಟಿ 20 ಫ್ರ್ಯಾಂಚೈಸ್ ಲೀಗ್​​ಗಳ ಭ್ರಷ್ಟಾಚಾರ ವಿರೋಧಿ ಸಂಹಿತೆಗಳ ಏಳು ಸಂಹಿತೆಗಳನ್ನು ಉಲ್ಲಂಘಿಸಲು 34 ವರ್ಷದ ಆಟಗಾರ ಒಪ್ಪಿಕೊಂಡ ನಂತರ ಮೇ 2 ರಂದು ಉನ್ನತ ಸಂಸ್ಥೆ ತನ್ನ ನಿರ್ಧಾರ ದೃಢಪಡಿಸಿದೆ.

ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಸಾರ್ವಜನಿಕ ಹೇಳಿಕೆಯಲ್ಲಿ, ಡೆವೊನ್ ಹಲವಾರು ಭ್ರಷ್ಟಾಚಾರ ವಿರೋಧಿ ಅರಿವು ಮೂಡಿಸುವ ಅಧಿವೇಶನಗಳಲ್ಲಿ ಭಾಗವಹಿಸಿದ್ದರು. ಸಂಹಿತೆಗಳ ಅಡಿಯಲ್ಲಿ ಅವರ ಬಾಧ್ಯತೆಗಳ ಬಗ್ಗೆ ತಿಳಿದಿದ್ದರು. ಆದರೂ ಅವರು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ (ಎಲ್​ಪಿಎಲ್), ಅಭಿ ಧಾಬಿ ಟಿ 10 ಮತ್ತು ಕ್ಯಾರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಎಂಬ ಮೂರು ವಿಭಿನ್ನ ಫ್ರ್ಯಾಂಚೈಸ್ ಲೀಗ್​​ಗಳ ಕ್ರಿಕೆಟಿಗ ತನ್ನ ಬಾಧ್ಯತೆಗಳನ್ನು ಪೂರೈಸಲು ವಿಫಲರಾಗಿದ್ದಾರೆ ಎಂದು ಮಾರ್ಷಲ್ ದೃಢಪಡಿಸಿದರು.

ಥಾಮಸ್ ಅವರನ್ನು ಎಲ್ಲಾ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್​​ನಿಂದ ಐದು ವರ್ಷಗಳ ನಿಷೇಧವನ್ನು ವಿಧಿಸಲಾಗಿದೆ ಎಂದು ಐಸಿಸಿ ದೃಢಪಡಿಸಿದೆ.

ಆಂಟಿಗುವಾ ಬ್ಯಾಟರ್​ 2009 ರಲ್ಲಿ ಬಾಸೆಟೆರೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ 20 ಐ ಪಂದ್ಯದ ಮೂಲಕ ವೆಸ್ಟ್ ಇಂಡೀಸ್ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಅವರು ಒಂದು ಟೆಸ್ಟ್, 21 ಏಕದಿನ ಮತ್ತು 12 ಟಿ 20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ 34 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊನೆಯದ್ದು ಡಿಸೆಂಬರ್ 2022 ರಲ್ಲಿ ಅಡಿಲೇಡ್ ಓವಲ್​ನಲ್ಲಿ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!