ಅಬಾರ್ಶನ್ ಮಾತ್ರೆ ಸೇವಿಸಿ 11 ತಿಂಗಳ ಮಗುವಿನ ತಾಯಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಅಬಾರ್ಷನ್ ಮಾತ್ರೆ ತೆಗೆದುಕೊಂಡ ಮಹಿಳೆಯೊಬ್ಬರಿಗೆ ಓವರ್ ಬ್ಲೀಡಿಂಗ್ ಆಗಿ ಮೃತಪಟ್ಟಿದ್ದಾರೆ.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 11 ತಿಂಗಳ ಮಗುವಿನ ತಾಯಿ ಪ್ರೀತಿ ಕುಶ್ವಾಸ್ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ. ಪಿರಿಯಡ್ಸ್ ಆಗದ ಕಾರಣ ಪ್ರೆಗ್ನೆನ್ಸಿ ತಪಾಸಣೆ ಮಾಡಿಸಿದ್ದು, ಗರ್ಭಿಣಿ ಎನ್ನುವ ವಿಚಾರ ತಿಳಿದಿದೆ. ಈ ಬಗ್ಗೆ ಪತಿಗೆ ವಿಷಯ ತಿಳಿಸಿದ್ದಾರೆ.

ಪತಿ ವೈದ್ಯರ ಬಳಿ ಹೋಗೋಣ ಎಂದು ಹೇಳಿದ್ದಾರೆ. ಆದರೆ ಪ್ರೀತಿಗೆ ಇದು ಒಪ್ಪಿಗೆ ಇರಲಿಲ್ಲ. ಗಂಡನಿಗೆ ಹೇಳಿದರೆ ಮಾತ್ರೆ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಅವರಿಗೆ ತಿಳಿಸದೇ ಮಾತ್ರೆ ತೆಗೆದುಕೊಂಡಿದ್ದಾರೆ. ಮನೆಯಲ್ಲಿಯೇ ಬ್ಲೀಡಿಂಗ್ ಹೆಚ್ಚಾಗಿದೆ. ತಕ್ಷಣ ಗಂಡನಿಗೆ ಪ್ರೀತಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪತಿ ಮನೆಗೆ ಬಂದು ಪ್ರೀತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬ್ಲೀಡಿಂಗ್ ಹೆಚ್ಚಾಗಿದ್ದು, ಪ್ರೀತಿ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!