RECIPE| ರುಚಿಕರವಾದ ಆಂಧ್ರ ಶೈಲಿಯ “ನುಗ್ಗೇಕಾಯಿ ಮಸಾಲಾ” ಟ್ರೈ ಮಾಡಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು: 

ನುಗ್ಗೇಕಾಯಿ: 5/6
ಈರುಳ್ಳಿ: ಒಂದು
ಶುಂಠಿ, ಬೆಳ್ಳುಳ್ಲಿಪೇಸ್ಟ್:‌ ಒಂದು ಸ್ಪೂನ್‌
ಖಾರದ ಪುಡಿ:ಒಂದು ಚಮಚ
ಅರಿಶಿನ:ಸ್ವಲ್ಪ
ಉಪ್ಪು:ರುಚಿಗೆ
ಎಣ್ಣೆ:ಸ್ವಲ್ಪ, ಮಸಾಲೆ ಪದಾರ್ಥಗಳು

ಮಾಡುವ ವಿಧಾನ: 

ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ನಂತರ ಮಸಾಲೆ ಪದಾರ್ಥಗಳು, ಕಾರದ ಪುಡಿ, ಅರಿಶಿನ ಹಾಕಿ. ಮಸಾಲೆ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. ನಂತರ ನುಗ್ಗೇಕಾಯಿ ಹಾಕಿ ಸ್ವಲ್ಪ ನೀರು ಚಿಮುಕಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚಿ ಇನ್ನೊಂದು ಹತ್ತು ನಿಮಿಷ ಬೇಯಲು ಬಿಡಿ. ನುಗ್ಗೇಕಾಯಿ ಚೆನ್ನಾಗಿ ಬೆಂದ ನಂತರ ಅವುಗಳಿಂದ ಎಣ್ಣೆ ಹೊರಬರಲು ಪ್ರಾರಂಭಿಸುತ್ತದೆ. ನಂತರ ಸ್ಟವ್ ಆಫ್ ಮಾಡಿ ಮತ್ತು ರುಚಿಕರವಾದ ಆಂಧ್ರ ಶೈಲಿಯ ಡ್ರಮ್ ಸ್ಟಿಕ್ ಮಸಾಲಾ ತಯಾರು. ಬಿಸಿ ಬಿಸಿ ಅನ್ನ, ತುಪ್ಪ, ಮೊಸರಿನೊಂದಿಗೆ ಬಹಳ ರುಚಿಕರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!