ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ನಲ್ಲಿ ತಾಯಿಯೇ ತನ್ನ ನವಜಾತ ಶಿಶುವನ್ನು ದುಡ್ಡಿಗೆ ಮಾರಿದ್ದಾರೆ!
ಹೌದು, ಛತ್ರಾ ಜಿಲ್ಲೆಯಲ್ಲಿ ಹುಟ್ಟಿದ ಗಂಡು ಮಗುವನ್ನು ತಾಯಿಯೇ ಮಾರಾಟ ಮಾಡಿದ್ದು, ತಾಯಿ ಹಾಗೂ ೧೧ ಜನರನ್ನು ಪೊಲೀಸರು ಬಂಧಿಸಿದ್ದಾರೆ.
ತಾಯಿ ಆಶಾದೇವಿ ಮಗುವನ್ನು ಮಾರಿದ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಮಗುವನ್ನು ರಕ್ಷಿಸಿ ತಾಯಿಯನ್ನು ಬಂಧಿಸಿದ್ದಾರೆ. ಆಶಾದೇವಿ ಅಡ್ವಾನ್ಸ್ ಆಗಿ ಪಡೆದ ಒಂದು ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ.