ಮಗುವಿನ ಜನನದ ಬಳಿಕವೂ ತಾಯಿಗಿದೆ ಮಾತೃತ್ವ ರಜೆ ಪಡೆಯುವ ಹಕ್ಕು: ಅಲಹಾಬಾದ್ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಗುವಿನ ಜನನದ ನಂತರವೂ ಮಾತೃತ್ವ ರಜೆ ಪಡೆಯುವ ಹಕ್ಕು ಮಹಿಳೆಗೆ ಇದೆ. ಮಾತೃತ್ವ ರಜೆ ಮತ್ತು ಮಕ್ಕಳ ಆರೈಕೆ ರಜೆ ಎರಡೂ ಬೇರೆ ಬೇರೆ ರಜೆಗಳು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಶಿಕ್ಷಕಿಯೊಬ್ಬರಿಗೆ ಹೆರಿಗೆ ರಜೆ ನೀಡುವ ಅರ್ಜಿ ವಜಾಗೊಳಿಸಿದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ಎರಡೂ ರಜೆಯನ್ನ ಒಟ್ಟಿಗೆ ತೆಗೆದುಕೊಳ್ಳಲು ಅವಕಾಶವಿದೆ. ಮಗು ಈಗಾಗಲೇ ಹುಟ್ಟಿದೆ ಎಂಬ ಕಾರಣಕ್ಕಾಗಿ ಹೆರಿಗೆ ರಜೆಯನ್ನು ನಿರಾಕರಿಸುವುದು ತಪ್ಪು ಎಂದು ಜಸ್ಟೀಸ್ ಅಶುತೋಷ್ ಶ್ರೀವಾಸ್ತವ ಅವರ ಪೀಠವು ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!