ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಗೆ ಹೋದ್ರೆ ಅಮ್ಮ ಸ್ನಾನ ಮಾಡಿಸ್ತಾಳೆ, ಸ್ನಾನ ಮಾಡೋದಕ್ಕೆ ಇಷ್ಟವಿಲ್ಲದ ಬಾಲಕ ಕಾರ್‌ನಲ್ಲಿ ಅಡವಿ ಕುಳಿತಿದ್ದು, ಉಸಿರುಗಟ್ಟಿ ಮೃತಪಟ್ಟಿದೆ.
ಗುಜರಾತ್‌ನ ಜುನಾಗಢದಲ್ಲಿ ಭಾರತಿ ಅವರ ಐದು ವರ್ಷದ ಪುತ್ರ ಆದಿತ್ಯ ಮೃತ ಬಾಲಕ. ಆದಿತ್ಯ ಸ್ನಾನ ಮಾಡುವುದು ಸಮಯ ಪೋಲು ಮಾಡಿದಂತೆ, ಆಡಲು ಸಮಯ ಬೇಕು ಎಂದು ಕಾರ್‌ನೊಳಗೆ ಬಚ್ಚಿಟ್ಟುಕೊಂಡಿದ್ದಾನೆ.
ಮನೆಯ ಮುಂದೆ ಇರುವ ಕಾರ್ಖಾನೆಯೊಂದರಲ್ಲಿ ಕೆಟ್ಟು ಹೋಗಿದ್ದ ಕಾರ್‌ನ್ನು ನಿಲ್ಲಿಸಲಾಗಿತ್ತು. ಕಾರ್‌ನ ಬಾಗಿಲು ತೆಗೆದು ಒಳಗೆ ಹೋಗಿದ್ದಾನೆ. ಆದರೆ ಬಾಗಿಲು ತೆರೆಯಲು ಗೊತ್ತಾಗಿಲ್ಲ.
ಪೋಷಕರು ಆದಿತ್ಯನನ್ನು ಎಲ್ಲೆಡೆ ಹುಡುಕಿ ಹೈರಾಣಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಸಿಸಿಟಿವಿ ಸಹಾಯದಿಂದ ಆದಿತ್ಯ ಕಾರ್‌ಒಳಗೆ ಹೋಗುವ ದೃಶ್ಯ ಕಾಣಿಸಿದೆ. ಕಾರ್ ಬಾಗಿಲು ತೆರೆದಾಗ ಆದಿತ್ಯನಿಗೆ ಪ್ರಜ್ಞೆ ಇರಲಿಲ್ಲ. ಉಸಿರಾಡಲು ಕಷ್ಟಪಡುತ್ತಿದ್ದ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆದಿತ್ಯ ಮೃತಪಟ್ಟಿದ್ದಾನೆ.