ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂದೇ ಬಿಡ್ತು ಯುಗಾದಿ. ಈ ಹಬ್ಬ ಅಂದ್ರೆ ಸಾಕು ನೆನಪಿಗೆ ಬರೋದೆ ಬಗೆಬಗೆಯ ತಹರೇವಾರಿ ಖಾದ್ಯಗಳು. ಈ ಹ್ಬಬದ ಅಡುಗೆ ವಿಶೇಷ ಏನಪ್ಪ ಅಂದ್ರೆ ಎಲ್ಲವೂ ಮನೆಯಲ್ಲೇ ತಯಾರಿಸುವ ಖಾದ್ಯಗಳಾಗಿರುತ್ತವೆ. ಯಾವುದೇ ಅಂಗಡಿಯಿಂದಾಗಲೀ, ಬೇಕರಿಯಿಂದಾಗಲೀ ಯಾವುದೇ ರೀತಿಯನ್ನು ಸಿಹಿಯನ್ನು ತರುವುದು ವಾಡಿಕೆಯಿಲ್ಲ ಎಲ್ಲವೂ ಮನೆಯಲ್ಲೇ ತಯಾರಾಗುವ ಈ ಭಕ್ಷ್ಯಗಳ ಸವಿಯಲು ಬಲು ರುಚಿಯೂ ಹೌದು.
ದೇಶದ ಹಲವೆಡೆ ಈ ಹಬ್ಬ ಆಚರಣೆ ಮಾಡುವುದರಿಂದ ಒಬ್ಬೊಬ್ಬರ ಆಹಾರ ಪದ್ದತಿ ಒಂದೊಂದು ರೀತಿಯಲ್ಲಿರುತ್ತವೆ. ಆದರೂ ಎಲ್ಲದರಲ್ಲೂ ಕಾಮನ್ ಅಡುಗೆ ಅಂದರೆ ಅದು ಹೋಳಿಗೆ ಮಾತ್ರ.
ನಮ್ಮ ಕರ್ನಾಟಕದಲ್ಲಿ ಬೇವು ಬೆಲ್ಲದ ಜೊತೆಗೆ, ಹೋಳಿಗೆ(ಬೇಳೆ ಹೋಳಿಗೆ, ಕಾಯಿ ಹೋಳಿಗೆ, ಶೇಂಗಾ ಹೋಳಿಗೆ, ಹಾಲು ಹೋಳಿಗೆ ಬಹಳ ಫೇಮಸ್) ಜೊತೆಗೆ ವಿವಿಧ ರೀತಿಯ ಪಲ್ಯಗಳು, ಬಾಳೆ ಎಲೆ ತುಂಬಾ ತುಂಬಿರುತ್ತವೆ. ನೆರೆ ರಾಜ್ಯಗಳಲ್ಲಿ ಸ್ವಲ್ಪ ವಿಭಿನ್ನವಾಗಿ ಯುಗಾದಿ ಪಚ್ಚಡಿ ಸಿದ್ದಪಡಿಸುತ್ತಾರೆ. ಅದರಲ್ಲಿ ಷಡ್ ರುಚಿಗಳನ್ನು ಸೇರಿಸಿ ಈ ಪಚ್ಚಡಿ ತಯಾರು ಮಾಡುತ್ತಾರೆ. ಬೆಲ್ಲ, ಬೇವು, ಮಾವು, ಹುಣಸೆ, ಉಪ್ಪು, ಮೆಣಸು ಬಳಸಿ ಈ ಖಾದ್ಯವನ್ನು ತಯಾರಿಸುತ್ತಾರೆ.
ಹಬ್ಬಕ್ಕೆ ಈ ಖಾದ್ಯಗಳೂ ನಿಮ್ಮ ಮೆನುವಿನಲ್ಲಿರಲಿ
- ಕೇಸರಿ ಬಾತ್
- ಶ್ಯಾವಿಗೆ ಪಾಯಸ
- ಸಿಹಿ ಪೊಂಗಲ್
- ಮಾವಿನ ಕಾಯಿ ಚಿತ್ರಾನ್ಕ
- ಡುಬು
- ಹೋಳಿಗೆ(ಬೇಳೆ ಹೋಳಿಗೆ, ಕಾಯಿ ಹೋಳಿಗೆ, ಶೇಂಗಾ ಹೋಳಿಗೆ, ಹಾಲು ಹೋಳಿಗೆ)