ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಸಿನಿಪ್ರಿಯರನ್ನು ರಂಜಿಸೋಕೆ ಬರೋಬ್ಬರಿ ಏಳು ಸಿನಿಮಾಗಳು ಬರ್ತಿವೆ.
ಇಂಡಿಯನ್ 2, ಗುಂಟೂರು ಖಾರಂ, ಕ್ಯಾಪ್ಟನ್ ಮಿಲ್ಲರ್, ಕಲ್ಕಿ 2898 ಏಡಿ, ಮೆರ್ರಿ ಕ್ರಿಸ್‌ಮಸ್, ಹನುಮಾನ್ ಹಾಗೂ ಈಗಲ್ ಉಸ್ತಾದ್ ಭಗತ್ ಸಿಂಗ್ ತೆರೆ ಕಾಣಲಿರುವ ಸಿನಿಮಾಗಳು.
ಇವುಗಳಲ್ಲಿ ಮಹೇಶ್ ಬಾಬು ಅಭಿನಯದ ಗುಂಟೂರು ಖಾರಂ ಹಾಗೂ ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಮೇಲೆ ಜನ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಕ್ರಾಂತಿ ದಿನ ರಜೆಯಾದ ಕಾರಣ ಜನರು ಥಿಯೇಟರ್‌ಗೆ ತೆರಳಿ ಸಿನಿಮಾ ವೀಕ್ಷಿಸುವ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ.
ಕ್ಯಾಪ್ಟನ್ ಮಿಲ್ಲರ್‌ನಲ್ಲಿ ಧನುಷ್ ಜೊತೆ ಶಿವಣ್ಣ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಲಿದ್ದು, ಕನ್ನಡಿಗರಿಗೂ ಸಿನಿಮಾ ಬಗ್ಗೆ ಆಸಕ್ತಿ ಇದೆ.