Friday, June 2, 2023

Latest Posts

ಶರಣಬಸವೇಶ್ವರ ಸಂಸ್ಥಾನಕ್ಕೆ ಸಂಸದ ತೇಜಸ್ವಿ ಸೂರ್ಯ ಭೇಟಿ!

ಹೊಸದಿಗಂತ ವರದಿ,ಕಲಬುರಗಿ:

ಭಾರತೀಯ ಯುವ ಜನತಾ ಮೋರ್ಚಾದ ಭಾರತೀಯ ಯುವ ಜನತಾ ಮೋರ್ಚಾದ (ಬಿವೈಜೆಎಂ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಗುರುವಾರ ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜೆಗೈದು ನಂತರ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‍ರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರ ದರ್ಶನ ಪಡೆದರು.

ಈ ಸಂಧರ್ಭದಲ್ಲಿ ಪೂಜ್ಯ ಡಾ. ಅಪ್ಪಾಜಿಯವರು ತೇಜಸ್ವಿ ಸೂರ್ಯ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಅಪ್ಪಾಜಿ ಹಾಗೂ ಅವ್ವಾಜಿಯವರ ಜೊತೆ ಕುಶಲೋಪರಿಯಾಗಿ ಮಾತನಾಡುತ್ತಾ, ಅನ್ನದಾಸೋಹ ಹಾಗೂ ಶಿಕ್ಷಣದಾಸೋಹದ ಜೊತೆಗೆ ಸಂಸ್ಥಾನದ ಬಗ್ಗೆ ತಿಳಿದುಕೊಂಡು, ಶಿಕ್ಷಣ ವಿಶ್ವವಿದ್ಯಾಲಯದ ಮಟ್ಟಿಗೆ ಬೆಳೆದು ಬಂದ ದಾರಿಯನ್ನು ತಿಳಿದುಕೊಂಡ ಸೂರ್ಯ ಅವರು ಆಶೀರ್ವಾದ ಪಡೆದರು.

ಈ ಸಂಧರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ ನಿಷ್ಠಿ, ವಿವಿಯ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಡಾ. ಅಲ್ಲಮ ಪ್ರಭು ದೇಶಮುಖ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!