Friday, June 2, 2023

Latest Posts

ಖಲಿಸ್ತಾನಿ ನಾಯಕ ಅಮೃತಪಾಲ್‌ಗೆ ಆಶ್ರಯ ನೀಡಿದ ಮಹಿಳೆ ಅರೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖಲಿಸ್ತಾನ ಉಗ್ರ ಸಂಘಟನೆಯ ಅಮೃತ್ ಪಾಲ್ ಸಿಂಗ್ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಪೊಲೀಸರು ಅಮೃತ್‌ಪಾಲ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದೀಗ ಅಮೃತ್‌ಪಾಲ್ ಸಿಂಗ್ ಪರಾರಿ ವೇಳೆ ಅಶ್ರಯ ನೀಡಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್‌ನಿಂದ ಪರಾರಿಯಾದ ಅಮೃತ್‌ಪಾಲ್‌ಗೆ ಹರ್ಯಾಣದಲ್ಲಿ ಮಹಿಳೆ ಆಶ್ರಯ ನೀಡಿದ್ದರು. ಮಹಿಳೆಯ ತೀವ್ರ ವಿಚಾರಣೆ ಕೈಗೊಂಡಿರುವ ಪೊಲೀಸರು, ಅಮೃತ್‌ಪಾಲ್ ಸಿಂಗ್ ಕೊನೆಯ ಟವರ್ ಲೋಕೇಶನ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಶಹಬಾದ್ ಏರಿಯಾ ನಿವಾಸಿಯಾಗಿರುವ ಬಲ್ಜಿತ್ ಕೌರ್ ಅನ್ನೋ ಮಹಿಳೆ ಅಮೃತ್‌ಪಾಲ್ ಸಿಂಗ್‌ಗೆ ಆಶ್ರಯ ನೀಡಿದ್ದರು. ಅಮೃತ್‌ಪಾಲ್ ಸಿಂಗ್ ಜೊತೆಗ ಆತನ ಸಹಚರರಿಗೂ ಆಶ್ರಯ ನೀಡಲಾಗಿತ್ತು. ಮಹಿಳೆ ತಮ್ಮ ಮನೆಯಲ್ಲೇ ಅಮೃತ್‌ಪಾಲ್ ಹಾಗೂ ಆತನ ಆಪ್ತರಿಗೆ ಆಶ್ರಯ ನೀಡಿದ್ದರು. ಬಳಿಕ ಅಲ್ಲಿಂದ ಪರಾರಿಯಾಗಲು ನೆರವು ನೀಡಿದ್ದರು. ಈ ಕುರಿತು ಮಾಹಿತಿ ಪಡೆದ ಹರ್ಯಾಣ ಪೊಲೀಸರು ಬಲ್ಜಿತ್ ಕೌರ್‌ನನ್ನು ಬಂಧಿಸಿದ್ದಾರೆ.

ಅಮೃತ್‌ಪಾಲ್ ಸಿಂಗ್ ಕೊನೆಯ ಬಾರಿಗೆ ಮೊಬೈಲ್ ಟವರ್ ಲೋಕೇಶನ್ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಹರ್ಯಾಣ, ರಾಜಸ್ಥಾನ ಗಡಿ ಬಾಗದಲ್ಲಿ ಅಮೃತ್‌ಪಾಲ್ ಸಿಂಗ್ ಕಣ್ತಪ್ಪಿಸಿ ಓಡಾಡುತ್ತಿರುವುದು ಪೊಲೀಸರ ಟವರ್ ಲೋಕೇಶನ್ ಫೈಂಡರ್‌ನಲ್ಲಿ ಪತ್ತೆಯಾಗಿದೆ. ಇತ್ತ ಹರ್ಯಾಣದಲ್ಲಿನ ಅಮೃತ್‌ಪಾಲ್ ಸಿಂಗ್‌ಗೆ ಆಶ್ರಯ ನೀಡಿದ್ದ ಮಹಿಳೆಯನ್ನು ಬಂಧಿಸಿರುವ ಬೆನ್ನಲ್ಲೇ ಪಂಜಾಬ್, ಹರ್ಯಾಣ ಹಾಗೂ ರಾಜಸ್ಥಾನದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಇದೀಗ ಲುಧಿಯಾನ ಜಿಲ್ಲೆಯ ಮಂಗೇವಾಲ ಗ್ರಾಮದಲ್ಲಿ ಅಮೃತ್‌ಪಾಲ್ ಸಿಂಗ್‌ಗೆ ಭದ್ರತೆ ನೀಡಿದ್ದ ತಜಿಂದರ್ ಸಿಂಗ್ ಗಿಲ್‌ನನ್ನು ಬಂಧಿಸಲಾಗಿದೆ. ಲೈಸೆನ್ಸ್ ರಹಿತಿ ಶಸ್ತ್ರಾಸ್ತ್ರಗಳ ಪೋಟೋವನ್ನು ಸಾಮಾಜಿಕ ಜಾಲಾತಣದಲ್ಲಿ ಹಾಕಿದ್ದ. ಈ ಕುರಿತ ತನಿಖೆ ನಡೆಸಿದ ಪೊಲೀಸರು ಗಿಲ್‌ನನ್ನು ಬಂಧಿಸಿದ್ದಾರೆ. ಈತನ ಅಂಜಾಲಾ ಪೊಲೀಸ್ ಠಾಣೆ ಮೇಲೆ ಮುತ್ತಿಗೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!