ಹೊಸದಿಗಂತ ವರದಿ ಮಂಗಳೂರು:
ನಗರದ ಹೊರವಲಯದ ಎಂಆರ್ಪಿಎಲ್ (ಮಂಗಳೂರು ರಿಫೈನರಿ ಆಂಡ್ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಘಟಕದಲ್ಲಿ ಸೆ.30ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾರ್ಮಿಕ ರಾಜೇಶ್ ಡಿಸಿಲ್ವಾ (38) ಅವರು ಚಿಕಿತ್ಸೆ ಫಲಿಸದೆ ಶನಿವಾರ ಸಾವನ್ನಪ್ಪಿದ್ದಾರೆ.
ಮೃತರ ನಿಧಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಎಂಆರ್ಪಿಎಲ್ ಪರಿಹಾರವಾಗಿ ಕುಟುಂಬಕ್ಕೆ 1.20 ಕೋಟಿ ನೀಡುವುದಾಗಿ ಘೋಷಿಸಿದೆ.
ಎಂಆರ್ಪಿಎಲ್ನ ಸಿಎಚ್ಟಿ (ಕೋಕರ್ ಹೈಡ್ರೊಟ್ರೀಟರ್) ಘಟಕದಲ್ಲಿ ಸೆ.30ರಂದು ಸಂಭವಿಸಿದ್ದ ಅವಘಡದಲ್ಲಿ ರಾಜೇಶ್ ಅವರು ಸುಟ್ಟ ಗಾಯಗಳಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮೃತರ ಕುಟುಂಬದ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರೂ.90 ಲಕ್ಷ ಎಕ್ಸ್ಗ್ರೇಷಿಯಾ ಪರಿಹಾರ ನೀಡುವುದಾಗಿ ಆಡಳಿತ ಮಂಡಳಿ ಘೋಷಿಸಿದೆ. ಇದರೊಂದಿಗೆ ಒಟ್ಟು ಪರಿಹಾರ ಮೊತ್ತ ರೂ.1.20 ಕೋಟಿ ಆಗಲಿದೆ ಎಂದು ಎಂಆರ್ಪಿಎಲ್ ತಿಳಿಸಿದೆ.



