CINEMA| ಅಲ್ಲು ಅರ್ಜುನ್ ಸಿನಿಮಾದಲ್ಲಿ ಮೃಣಾಲ್ ಠಾಕೂರ್, ಯಾವ ಸಿನಿಮಾ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಮೊದಲ ಭಾಗ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಆಗಿದ್ದು, ಎರಡನೇ ಭಾಗಕ್ಕೆ ಭಾರೀ ಹೈಪ್ ಇದೆ. ಇತ್ತೀಚೆಗಷ್ಟೇ ಚಿತ್ರದ ಯೂನಿಟ್ ಪ್ರಮೋಷನ್ ಕೂಡ ಶುರುವಾಗಿದೆ. ಇದೇ ವೇಳೆ ಅಲ್ಲು ಅರ್ಜುನ್ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಪುಷ್ಪ 2 ನಲ್ಲಿ ಅಂದುಕೊಂಡಿದ್ದೀರಾ?? ಇಲ್ಲಾ ಕಣ್ರೀ..ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಸಿನಿಮಾ ಮಾಡಲಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಈ ಸಿನಿಮಾದಲ್ಲಿ ಬನ್ನಿಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿದೆ. ಮೃಣಾಲ್ ಬಾಲಿವುಡ್ ಹೀರೋಯಿನ್ ಆಗಿದ್ದು, ಸೌತ್ ನಲ್ಲೂ ಸೀತಾಗೆ ಒಳ್ಳೆ ಕ್ರೇಜ್ ಸಿಗುತ್ತಿದ್ದು, ಕಥೆಯ ವಿಷಯದಲ್ಲಿ ಮೃಣಾಲ್ ನ್ಯಾಯ ನೀಡ್ತಾರೆ ಅನ್ನೋದು ನಿರ್ದೇಶಕರ ಅನಿಸಿಕೆ.

ಸದ್ಯ, ಸಂದೀಪ್ ವಂಗಾ ಬಾಲಿವುಡ್‌ನಲ್ಲಿ ರಣಬೀರ್ ಕಪೂರ್ ಜೊತೆ ಅನಿಮಲ್ ಚಿತ್ರದ ಶೂಟಿಂಗ್ ಮಾಡುತ್ತಿದ್ದಾರೆ. ಈ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಅಷ್ಟರೊಳಗೆ ಪುಷ್ಪ 2 ಚಿತ್ರೀಕರಣವೂ ಪೂರ್ಣಗೊಳ್ಳಲಿದೆ. ಅದರ ಬೆನ್ನಲ್ಲೇ ಸಂದೀಪ್ ಮತ್ತು ಬನ್ನಿ ಚಿತ್ರ ಹಳಿಗಳ ಮೇಲೆ ಏರಲಿದೆ ಎಂದು ವರದಿಯಾಗಿದೆ. ಈ ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!