ಧೋನಿ @41: ಇಂಗ್ಲೆಂಡ್‌ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹೇಂದ್ರ ಸಿಂಗ್‌ ಧೋನಿ ಭಾರತೀಯ ಕ್ರಿಕೆಟ್ ನ ದಂತಕಥೆ- ವಿಶ್ವದ ಅತ್ಯಂತ ಯಶಸ್ವಿ ನಾಯಕ. ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್‌ ಗೆಲ್ಲಿಸಿಕೊಟ್ಟ ಕಪ್ತಾನ. ಐಸಿಸಿಯ ಟಾಪ್‌ 3 ಪಂದ್ಯಾವಳಿಗಳಲ್ಲಿ ಟ್ರೋಫಿಗೆದ್ದ ವಿಶ್ವದ ಏಕೈಕ ನಾಯಕ ಎಂ.ಎಸ್‌.ಧೋನಿ ಗುರುವಾರ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಇಂಗೆಂಡ್‌ ಪ್ರವಾಸದಲ್ಲಿರುವ ಧೋನಿ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ವಿಶೇಷ ದಿನವನ್ನು ಸಂಭ್ರಮಿಸಿದ್ದಾರೆ. ಧೋನಿ ಪತ್ನಿ ಸಾಕ್ಷಿ, ಮಗಳು ಝಿವಾ ಮತ್ತು ಸ್ಟಾರ್ ಆಟಗಾರ ರಿಷಬ್ ಪಂತ್ ಈ ಆಚರಣೆಯಲ್ಲಿ ಭಾಗಿಯಾಗಿದ್ದಾರೆ.

ಧೋನಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿರುವುದನ್ನು ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಧೋನಿ ಬರ್ತ್‌ ಡೇ ಟಾಪ್‌ ಟ್ರೆಂಡಿಂಗ್‌ ನಲ್ಲಿದೆ. ಟ್ವಿಟರ್‌  #HappyBirthdayMSDhoni ಪೋಸ್ಟ್‌ಗಳಿಂದ ತುಂಬಿ ತುಳುಕುತ್ತಿದೆ. ಧೋನಿ ಸಮಕಾಲೀನ, ಹಾಲಿ- ಮಾಜಿ ಆಟಗಾರರು ಧೋನಿಗೆ  ಶುಭ ಹಾರೈಸಿ ಪೋಸ್ಟ್‌ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ರಾಂಚಿಯ ಸಣ್ಣ-ಪಟ್ಟಣದ ಹುಡುಗನೊಬ್ಬ ವಿಶ್ವದ ಅತ್ಯುತ್ತಮ ನಾಯಕ ಮತ್ತು ನಿಷ್ಣಾತ ವಿಕೆಟ್‌ಕೀಪರ್ ಆಗಿ ಬೆಳೆದು ಬಂದ ಬಗೆಯೇ ರೋಚಕ ಅಧ್ಯಾಯ. ಧೋನಿ ಅವರ ಕೋಲ್‌ ಹಾಗೂ ಚಾಣಕ್ಷ್ಯ ಸ್ವಭಾವವೇ ಅವರನ್ನು ಭಾರತದ ಯುವಜನತೆಯ ಐಕಾನ್ ಆಗಿ ಮಾಡಿದೆ.

2007 ರಲ್ಲಿ ಅಚ್ಚರಿಯ ಆಯ್ಕೆಯಾಗಿ ಟಿ20 ನಾಯಕತ್ವ ವಹಿಸಿಕೊಂಡ ಧೋನಿ ಚೊಚ್ಚಲ ಪ್ರಯತ್ನದಲ್ಲೇ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟರು. ಆ ಬಳಿಕ 2011 ರ ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಿಸುವ ಮೂಲಕ ಧೋನಿ ವಿಶ್ವದ ಅಗ್ರಮಾನ್ಯ ನಾಯಕ ಎನಿಸಿಕೊಂಡರು.

ಧೋನಿ ನೇತೃತ್ವದಲ್ಲಿ 200 ಪಂದ್ಯಗಳನ್ನಾಡಿರುವ ಭಾರತ110 ಪಂದ್ಯಗಳಲ್ಲಿ ಗೆದ್ದಿದೆ. ತವರಿನಲ್ಲಿ, ಅವರು 73 ಪಂದ್ಯಗಳಲ್ಲಿ 43 ಪಂದ್ಯಗಳನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇಲ್ಲಿಯವರೆಗೆ, ಎಂಎಸ್ ಧೋನಿ 90 ಟೆಸ್ಟ್, 348 ಏಕದಿನ ಮತ್ತು 98 ಟಿ20 ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 10,000 ಏಕದಿನ ರನ್‌, 5,000 ಟೆಸ್ಟ್ ರನ್‌ಗಳನ್ನು ಗಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!