ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್ ಬೇಸಿಗೆಯಲ್ಲಿ ಹೊಸ ಚೈತನ್ಯ ತುಂಬುವ ಫ್ಯಾಷನಬಲ್ ಉಡುಪುಗಳ ಪ್ರದರ್ಶನಕ್ಕೆ ಸಾಕ್ಷಿ ಆಯಿತು. ಈ ರನ್ ವೇಯಲ್ಲಿ ಐಕಾನಿಕ್ ಬ್ರಿಟಿಷ್ ರಿಟೇಲರ್ ಎಂ ಎಂಡ್ ಎಸ್ (ಮಾರ್ಕ್ಸ್ ಎಂಡ್ ಸ್ಪೆನ್ಸರ್) ತನ್ನ ಬಹುನಿರೀಕ್ಷಿತ ಸಮ್ಮರ್ 26 ಸಂಗ್ರಹವನ್ನು ಪ್ರದರ್ಶಿಸಿತು. ಈ ಮೂಲಕ ಎಂ ಎಂಡ್ ಎಸ್, ಮೆಚ್ಚುಗೆ ಸೂಚಿಸುವ ಸಣ್ಣ ಸಣ್ಣ ಕ್ಷಣಗಳು ಹೇಗೆ ಆತ್ಮವಿಶ್ವಾಸ ಹೆಚ್ಚಿಸಬಹುದು, ವೈಯಕ್ತಿಕ ಶೈಲಿಯನ್ನು ಪ್ರೇರೇಪಿಸಬಹುದು ಮತ್ತು ದೈನಂದಿನ ಫ್ಯಾಷನ್ ಅನ್ನು ಇನ್ನಷ್ಟು ಅರ್ಥಪೂರ್ಣವಾಗಿಸಬಹುದು ಎಂಬುದನ್ನು ಎತ್ತಿ ತೋರಿಸುವ ಪ್ರಶಂಸೆಗಳ ಶಕ್ತಿಯನ್ನು ಆಚರಿಸಿಕೊಂಡಿತು.
ಎಂ ಎಂಡ್ ಎಸ್ ಸಮ್ಮರ್ 2026 ಕಲೆಕ್ಷನ್ ವಿಶೇಷ
ಈ ಸಂಗ್ರಹವು ಬೇಸಿಗೆಯ ತಾಜಾತನದ ಅನುಭೂತಿಯೊಂದಿಗೆ ಹಾಗೂ ಸುಲಭ ಲಭ್ಯತೆಯ ಜೊತೆಗೆ ಕುಶಲಕರ್ಮಿಗಳ ವಿವರಗಳನ್ನು ಪೂರೈಸುವ ಉಡುಪುಗಳ ಪ್ರದರ್ಶದೊಂದಿಗೆ ಆರಂಭವಾಯಿತು. ಹತ್ತಿಯಿಂದ ತಯಾರಿಸಿದ ಟಾಪ್‌ಗಳು ದೈನಂದಿನ ಉಡುಗೆಗೆ ಮೋಜಿನ ಆಹ್ಲಾದತೆ ತಂದವು. ಚೆನ್ನಾಗಿ ಗಾಳಿಯಾಡುವ ಹಗುರವಾದ ಹತ್ತಿಯ ಉಡುಪುಗಳು ಯಾವುದೇ ಪ್ರಯತ್ನವಿಲ್ಲದ ಸ್ತ್ರೀತ್ವದ ನೋಟ ನೀಡುವಲ್ಲಿ ಯಶಸ್ವಿಯಾದವು.
ಸಂಕೀರ್ಣ ಕಸೂತಿ ಮಾಡಿದ ಗಿಲೆಟ್‌ಗಳು (ತೋಳಿಲ್ಲದ ಜಾಕೆಟ್) ಮತ್ತು ಉಡುಪುಗಳು ಬೆಚ್ಚನೆಯ ಹವಾಮಾನದ ಡ್ರೆಸ್ಸಿಂಗ್ ಶೈಲಿ ಹಾಗೂ ಶ್ರೀಮಂತ ವಿನ್ಯಾಸ ಮತ್ತು ಕರಕುಶಲತೆಯನ್ನು ಪ್ರಸ್ತುತಪಡಿಸಿದವು. ನೋಡಿದೊಡನೆ ಆರಾಮ ಭಾವ ಮೂಡಿಸುವ ಲಿನನ್ ಶರ್ಟ್‌ಗಳು ಶಾಂತತೆ ಮತ್ತು ಸಹಜ ತಂಪು ಸ್ಪರ್ಶದೊಂದಿಗೆ ಪ್ರದರ್ಶನವನ್ನು ಪೂರ್ಣಗೊಳಿಸಿದವು.
ಇದೇ ರೀತಿ ‘ದಿ ಹಾಲಿಡೇ ಎಡಿಟ್’ ವಿಶ್ರಾಂತಿದಾಯಕ ಪ್ರಿಂಟ್ ಮತ್ತು ರೇಖೆಗಳಿರುವ ಬೆಚ್ಚನೆಯ ಮಣ್ಣಿನ ಛಾಯೆಗಳ ಈಜುಡುಗೆ, ಸಡಿಲವಾದ ಬ್ರಿಝೀ ಉಡುಪುಗಳು, ಕೋಆರ್ಡ್ ಸೆಟ್‌ಗಳನ್ನು ಪರಿಚಯಿಸಿತು. ನೈಸರ್ಗಿಕ ವರ್ಣಗಳು, ಕರಾವಳಿ ಪ್ರೇರಿತ ಚಿತ್ತಾರಗಳು ಮತ್ತು ದ್ರವ ಆಕಾರಗಳಿರುವ ಉಡುಪುಗಳು ರಜಾದಿನಗಳ ಉಡುಪುಗಳಿಗೆ ಹೊಸ ವ್ಯಾಖ್ಯಾನ ಬರೆದವು. ಮಹಿಳೆಯರು ಸುಲಭವಾಗಿ ಧರಿಸಬಹುದಾದ ವಿನ್ಯಾಸಗಳ ಮೂಲಕ ಈ ಉಡುಪುಗಳ ಸಂಗ್ರಹ ಗಮನ ಸೆಳೆದವು.
ಇದನ್ನೂ ಓದಿ:
ಎಂ ಎಂಡ್ ಎಸ್ ಸಮ್ಮರ್ 2026 ಸಂಗ್ರಹದಲ್ಲಿ ‘ದಿ ಪೆರ್ ಉನಾ ಕಲೆಕ್ಷನ್’ ಕೂಡ ಗಮನ ಸೆಳೆದಿದೆ. ಇದರಲ್ಲಿ ಸಂಕೀರ್ಣ ಕಸೂತಿ ಮತ್ತು ಶುದ್ಧ ಬಿಳಿ ಹಾಗೂ ಕಂದು ಬಣ್ಣದ ಛಾಯೆಯೊಂದಿಗೆ ಗುಲಾಬಿ ಬಣ್ಣದ ಪಟ್ಟಿಗಳಿರುವ ಟಾಪ್‌ಗಳು ಮತ್ತು ಉಡುಪುಗಳು ನವಿರಾದ ಸ್ತ್ರೀತ್ವದ ಶಕ್ತಿಯನ್ನು ಬಿಂಬಿಸಿದವು. ಪ್ರತಿ ವಿವರವೂ ಉದ್ದೇಶಪೂರ್ವಕವಾಗಿರುವ ಸಂಗ್ರಹವಿದು ಎಂಬುದು ಇನ್ನೊಂದು ವಿಶೇಷ.
ಇದೇ ರೀತಿ ‘ದಿ ಕ್ಯಾಶುಯಲ್ ಎಡಿಟ್’ ಲಿನನ್ ಶಿನೋಸ್ ಮತ್ತು ಡೆನಿಮ್ ಸಂಯೋಜನೆಯ ಕ್ಲಾಸಿಕ್ ಪೋಲೋಸ್ ಮತ್ತು ಶರ್ಟ್‌ಗಳ ಮೂಲಕ ಸ್ವಚ್ಛ, ಬಹುಮುಖ ವರ್ಣಗಳನ್ನು ಪರಿಚಯಿಸಿತು.
‘ದಿ ಆಟೋಗ್ರಾಫ್ ಕಲೆಕ್ಷನ್ ಫಾರ್ ಮೆನ್’ ಹಗುರವಾದ ಸ್ಟ್ರೆಚ್ ಶಿನೋಸ್ ಮತ್ತು ಹೂವಿನ ಚಿತ್ತಾರಗಳಿರುವ ಶರ್ಟ್‌ಗಳನ್ನು ಮತ್ತು ಸಮಕಾಲೀನ ಕಟ್‌ಗಳನ್ನು ಪರಿಚಯಿಸಿತು. ಬೇಸಿಗೆಯಲ್ಲಿ ಪರಿಷ್ಕ್ರತ ವಿನ್ಯಾಸದ ಉಡುಪುಗಳನ್ನು ಬಯಸುವವರಿಗೆ ಇವು ಹೆಚ್ಚು ಸೂಕ್ತವಾಗುತ್ತವೆ.
ಮಾರ್ಕ್ಸ್ ಎಂಡ್ ಸ್ಪೆನ್ಸರ್ ಬಗ್ಗೆ:
ಭಾರತದಾದ್ಯಂತ ಮಾರ್ಕ್ಸ್ ಎಂಡ್ ಸ್ಪೆನ್ಸರ್ 85+ ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಮತ್ತು ಮೌಲ್ಯದ ಉಡುಪುಗಳನ್ನು ಹಾಗೂ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. 1884ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ 140 ವರ್ಷಗಳಿಗೂ ಹೆಚ್ಚು ಬ್ರಿಟಿಷ್ ಪರಂಪರೆ ಹೊಂದಿರುವ ಯುಕೆಯ ಪ್ರಮುಖ ರಿಟೇಲರ್ ಗಳಲ್ಲಿ ಒಂದಾಗಿದೆ.
ಮಾರ್ಕ್ಸ್ ಎಂಡ್ ಸ್ಪೆನ್ಸರ್ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ https://www.marksandspencer.in/ ಗೆ ಭೇಟಿ ನೀಡಿ.



