Monday, October 3, 2022

Latest Posts

ರಸ್ತೆ ಗುಂಡಿಯಲ್ಲಿ ಶಾಸಕರೆದುರಲ್ಲೇ ಮಡ್‌ ಬಾತ್‌: ಕೇರಳದ ವ್ಯಕ್ತಿಯಿಂದ ವಿಚಿತ್ರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಕೇರಳದ ಮಲಪ್ಪುರಂ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ರಸ್ತೆಯ ಹೊಂಡಗಳ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಶಾಸಕರ ಸಮ್ಮುಖದಲ್ಲಿ ನೀರು ನಿಂತ ಗುಂಡಿಯಲ್ಲಿ ಯೋಗಾಸನ ಮಾಡಿ ಸ್ನಾನ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ಹಮ್ಜಾ ಪೊರಾಲಿ ಎಂದು ಗುರುತಿಸಲಾದ ವ್ಯಕ್ತಿ ಸ್ಥಳೀಯ ಶಾಸಕ ಯುಎ ಲತೀಫ್ ಅವರ ಮುಂದೆ ಮಡ್‌ ಯೋಗ ಮಾಡಿದ್ದಾನೆ. ಸ್ಥಳೀಯ ಮುಖಂಡರ ಕಾರು ಸ್ಥಳಕ್ಕೆ ಬಂದಾಗ, ಪೊರಾಲಿ ರಸ್ತೆ ಗುಂಡಿಯಲ್ಲಿ ಮಡ್‌ ಬಾಥ್‌ ಮಾಡಿದ್ದಾನೆ ಅಲ್ಲದೇ ಅದೇ ಗುಂಡಿಯಲ್ಲಿ ಬಟ್ಟೆ ಒಗೆದು ಆಕ್ರೋಶ ಹೊರಹಾಕಿದ್ದಾನೆ.

ಕಳೆದ ವಾರವಷ್ಟೇ ಕೇರಳದಲ್ಲಿ ರಸ್ತೆಗಳ ದುರವಸ್ಥೆಯ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿದ್ದವು. ಅದರೆ ಈ ಕುರಿತು ಯಾವ ರಾಜಕಾರಣಿಯೂ ಗಮನ ಹರಿಸಿರಲಿಲ್ಲ. ಪ್ರಸ್ತುತ ಈ ವಿಚಿತ್ರ ಪ್ರತಿಭಟನೆ ಎಲ್ಲರ ಗಮನ ಸೆಳೆಯಲು ಸಫಲವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!