Monday, October 3, 2022

Latest Posts

ಕಳವಾಗಿದ್ದು ತಮಿಳುನಾಡಲ್ಲಿ, ಸಿಕ್ಕಿದ್ದು ನ್ಯೂಯಾರ್ಕ್‌ನ ಹರಾಜಿನಲ್ಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

50 ವರ್ಷಗಳ ಹಿಂದೆ ತಮಿಳು ನಾಡಿನ ದೇವಾಲಯದಿಂದ ಕಳುವಾಗಿದ್ದ ಪಾರ್ವತಿ ವಿಗ್ರಹವನ್ನು ರಾಜ್ಯ ಪೊಲೀಸರು ನ್ಯೂಯಾರ್ಕ್‌ನ ಹರಾಜಿನಲ್ಲಿ ಪತ್ತೆ ಹಚ್ಚಿದ್ದಾರೆ.

1971ರ ಮೇ 12ರಂದು ಕುಂಬಕೋಣಂನಲ್ಲಿನ ನಾದನಪುರೇಶ್ವರ ದೇವಾಲಯದಲ್ಲಿ ಕಳುವಾಗಿದ್ದ 5 ವಿಗ್ರಹಗಳ ಪೈಕಿ ಪಾರ್ವತಿ ವಿಗ್ರಹವು ಒಂದಾಗಿತ್ತು. ಆಗಿನಿಂದ ಈ ವಿಗ್ರಹಗಳ ಪತ್ತೆಗಾಗಿ ಪೊಲೀಸರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಈಗ ನ್ಯೂಯಾರ್ಕ್‌ನಲ್ಲಿನ ಬೊನ್‌ಹ್ಯಾಮ್ಸ್ ಹರಾಜು ಕೇಂದ್ರದಲ್ಲಿ ವಿಗ್ರಹ ಪತ್ತೆಯಾಗಿದೆ. ಪೊಲೀಸರು 1972ರ ಯುನೆಸ್ಕೊದ ವಿಶ್ವ ಪಾರಂಪರಿಕ ಸಮಾವೇಶದಡಿ ಭಾರತಕ್ಕೆ ಮತ್ತೆ ತರಲು ಪ್ರಕ್ರಿಯೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!