ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಕೇಸ್ ನಲ್ಲಿ ತನ್ನ ಕೇಸ್ ತಾನೇ ಇಂದು ದೂರುದಾರ ಸ್ನೇಹಮಯಿ ಕೃಷ್ಣ ವಾದಿಸಿದ್ದಾರೆ . ಈಗಾಗಲೇ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಿದೆ.
ಮುಡಾ ಹಗರಣದಲ್ಲಿ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಈ ಒಂದು ತಕರಾರು ಅರ್ಜಿ ವಿಚಾರಣೆ ಆರಂಭವಾದಾಗ, ಜಮೀನ ಮಾಲೀಕರು ಯಾರು ಎಂಬುದನ್ನು ತನಿಖೆ ಮಾಡಿಲ್ಲ. ಡಿನೋಟಿಫಿಕೇಶನ್ ಆದ ಮೇಲೆ ಬಡಾವಣೆ ರಚನೆ ಹೇಗೆ ಮಾಡಿದರು? ಡಿನೋಟಿಫಿಕೇಶನ್ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳೇ ಇಲ್ಲ. ಬಡಾವಣೆಯನ್ನು ಕೃಷಿ ಜಮೀನು ಎಂದು ಮಾರಾಟ ಮಾಡಿದ್ದಾರೆ. 2024ರಲ್ಲಿ ದೇವನೂರು ಬಡಾವಣೆಯಲ್ಲಿ 369 ನಿವೇಶನಗಳಿದ್ದವು. ಹೀಗಾಗಿಯೇ ದೇವನೂರು ಬಡಾವಣೆ ಎಂದು ಬರೆದಿದ್ದ ಪತ್ರಕ್ಕೆ ವೈಟ್ನರ್ ಹಾಕಿದ್ದಾರೆ. ದೇವನೂರು ಬಡಾವಣೆಯಲ್ಲಿ ನಿವೇಶನವಿದ್ದರೂ ದುಬಾರಿ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ದೇವನೂರಲ್ಲಿ ನಿವೇಶನವಿದ್ದರೂ ದುಬಾರಿ ಬಡಾವಣೆಯಲ್ಲಿ ಹಂಚಿಕೆ ಎಂದು ವಾದ ಮಂಡಿಸಿದರು.
ಈ ವೇಳೆ ವಿಚಾರಣೆಯನ್ನು ಕೋರ್ಟ್ ಮಾರ್ಚ್ 25ಕ್ಕೆ ಮುಂದೂಡಿತು.