August 10, 2026
Monday, August 10, 2026
spot_img

Mug Cake | 2 ನಿಮಿಷದಲ್ಲಿ ರೆಡಿಯಾಗುತ್ತೆ ಹೆಲ್ದಿ ಓಟ್ಸ್ ಮಗ್ ಕೇಕ್: ಒಮ್ಮೆ ಟ್ರೈ ಮಾಡಿ

ಸಿಹಿ ತಿನ್ನಬೇಕು ಅನ್ನಿಸಿದಾಗ ಹೆಚ್ಚು ಸಮಯ ಕಳೆಯದೇ ಮನೆಯಲ್ಲೇ ಆರೋಗ್ಯಕರ ಕೇಕ್ ತಯಾರಿಸಬಹುದು. ಓಟ್ಸ್, ಹಾಲು ಮತ್ತು ಕೆಲವೇ ಪದಾರ್ಥಗಳಿಂದ ಕೇವಲ 2 ನಿಮಿಷಗಳಲ್ಲಿ ಸಿದ್ಧವಾಗುವ ಈ ಓಟ್ಸ್ ಮಗ್ ಕೇಕ್ ರುಚಿಯ ಜೊತೆಗೆ ಪೌಷ್ಟಿಕವೂ ಹೌದು. ಸಂಜೆ ಸ್ನ್ಯಾಕ್ ಗೆ ಇದು ಉತ್ತಮ ಆಯ್ಕೆ.

ಬೇಕಾಗುವ ಪದಾರ್ಥಗಳು

ಓಟ್ಸ್ – ½ ಕಪ್
ಹಾಲು – 3 ಚಮಚ
ಜೇನುತುಪ್ಪ ಅಥವಾ ಮೇಪಲ್ ಸಿರಪ್ – 1 ರಿಂದ 2 ಚಮಚ
ಎಣ್ಣೆ ಅಥವಾ ಕರಗಿದ ಬೆಣ್ಣೆ – 1 ಚಮಚ
ಬೇಕಿಂಗ್ ಪೌಡರ್ – ½ ಚಮಚ
ಉಪ್ಪು – ಒಂದು ಚಿಟಿಕೆ
ವೆನಿಲ್ಲಾ ಎಸೆನ್ಸ್ – ¼ ಚಮಚ
ದಾಲ್ಚಿನ್ನಿ ಪುಡಿ – ಒಂದು ಚಿಟಿಕೆ

ಮಾಡುವ ವಿಧಾನ

ಮೈಕ್ರೋವೇವ್‌ಗೆ ಸೂಕ್ತವಾದ ಮಗ್‌ನಲ್ಲಿ ಹಾಲು, ಜೇನುತುಪ್ಪ, ಎಣ್ಣೆ ಅಥವಾ ಬೆಣ್ಣೆ ಹಾಗೂ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಓಟ್ಸ್ ಪೌಡರ್, ಬೇಕಿಂಗ್ ಪೌಡರ್, ಉಪ್ಪು ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಗಂಟುಗಳಾಗದಂತೆ ನಯವಾಗಿ ಕಲಸಿ. ಮಗ್ ಅನ್ನು ಮೈಕ್ರೋವೇವ್‌ನಲ್ಲಿ 60–90 ಸೆಕೆಂಡುಗಳ ಕಾಲ ಹೈ ಪವರ್‌ನಲ್ಲಿ ಬೇಯಿಸಿ.

ಕೇಕ್ ಬೆಂದಿದೆಯೇ ಎಂದು ಪರೀಕ್ಷಿಸಿ. ಮಧ್ಯಭಾಗ ಗಟ್ಟಿಯಾಗಿದ್ದರೆ ಹೊರತೆಗೆದು ಸುಮಾರು 30 ಸೆಕೆಂಡು ತಣ್ಣಗಾಗಲು ಬಿಡಿ. ನಂತರ ಬಿಸಿ ಬಿಸಿಯಾಗಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !