ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಹಿನ್ನೆಲೆ ದೀಪಿಕಾ ನೋಡಲು ಉದ್ಯಮಿ ಮುಖೇಶ್ ಅಂಬಾನಿ ಎಚ್.ಎನ್ ರಿಲಾಯನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಪೋಷಕರಾಗಿರುವ ದೀಪಿಕಾ ದಂಪತಿಗೆ ಶುಭಕೋರಲು ಮುಖೇಶ್ ಭೇಟಿ ನೀಡಿದ್ದು, ದೀಪಿಕಾ ಮತ್ತು ಮಗುವಿನ ಕುಶಲೋಪರಿ ವಿಚಾರಿಸಿದ್ದಾರೆ. ಉದ್ಯಮಿ ಮುಖೇಶ್ ಆಸ್ಪತ್ರೆಯ ಆಗಮಿಸಿದ್ದ ವೇಳೆ, ಹೆಚ್ಚಿನ ಭದ್ರತೆ ಕೂಡ ನೀಡಲಾಗಿತ್ತು.
ಇನ್ನೂ ಮನೆಗೆ ಮುದ್ದಾದ ಹೆಣ್ಣು ಮಗುವಿನ ಆಗಮನವಾಗಿರೋದು ಸಹಜವಾಗಿ ಕುಟುಂಬಕ್ಕೆ ಖುಷಿಕೊಟ್ಟಿದೆ. ಈ ಜೋಡಿಗೆ ಬಾಲಿವುಡ್ ಸ್ಟಾರ್ ನಟ, ನಟಿಯರು ಶುಭಕೋರಿದ್ದಾರೆ. ಮಗುವಿನ ಮುಖ ಅದ್ಯಾವಾಗ ರಿವೀಲ್ ಮಾಡ್ತಾರೆ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.