ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಕುಟುಂಬಸ್ಥರು ತೆರಳಿದ್ದಾರೆ.
ಈ ವೇಳೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಅವರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ ಪ್ರಯಾಗ್‌ರಾಜ್ ಭೇಟಿ ನೀಡಿದ ಮುಖೇಶ್ ಅಂಬಾನಿ, ಅವರ ತಾಯಿ ಕೋಕಿಲಾಬೆನ್ ಅಂಬಾನಿ, ಪುತ್ರರಾದ ಅನಂತ್ ಮತ್ತು ಆಕಾಶ್ ಅಂಬಾನಿ, ಆಕಾಶ್ ಅವರ ಪತ್ನಿ ಶ್ಲೋಕಾ ಮೆಹ್ತಾ ಮತ್ತು ಅವರ ಇಬ್ಬರು ಮಕ್ಕಳಾದ ಪೃಥ್ವಿ ಮತ್ತು ವೇದಾ ಅವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಕುಂಭಮೇಳ ಭೇಟಿ ವೇಳೆ ಅಂಬಾನಿ ಅವರ ಕುಟುಂಬ ಪರಮತೀರ್ಥ ತ್ರಿವೇಣಿ ಪುಷ್ಪ ಆಶ್ರಮದಲ್ಲಿ ನಡೆದ ಯಜ್ಞದಲ್ಲಿ ಭಾಗವಹಿಸಿತ್ತು.