ಹೊಸದಿಗಂತ ಡಿಜಿಟಲ್ ಡೆಸ್ಕ್
`ಬಿಂದಾಸ್’ ನಟಿ ನಟಿ ಹನ್ಸಿಕಾ ಮೋಟ್ವಾನಿ ತನ್ನ ಬಹುಕಾಲದ ಗೆಳೆಯ ಸೋಹೈಲ್ ಕಥುರಿಯಾ ಜೊತೆ ಜೈಪುರದ ಮುಂಡೋಟಾ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ, ಸೋಹೈಲ್ ಕಥುರಿಯಾ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರಾದಯದ ಪ್ರಕಾರ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದಾರೆ.
ಇನ್ನೂ ಕೆಲ ದಿನಗಳ ಹಿಂದೆ ಪ್ಯಾರೀಸ್ನಲ್ಲಿ ಹನ್ಸಿಕಾಗೆ ಸೋಹೈಲ್ ಪ್ರಪೋಸ್ ಮಾಡಿದ್ದರು. ಈ ಕುರಿತ ಫೋಟೋಗಳನ್ನ ಶೇರ್ ತನ್ನ ಜೀವನ ಸಂಗಾತಿಯನ್ನ ಸೋಷಿಯಲ್ ಮೀಡಿಯಾ ಮೂಲಕ ನಟಿ ಪರಿಚಯಿಸಿದ್ದರು. ಸಿನಿಮಾರಂಗದ ಸ್ನೇಹಿತರು ಶುಭಹಾರೈಸುತ್ತಿದ್ದಾರೆ