ಭಾರತ ಜಾತ್ಯತೀತ ರಾಷ್ಟ್ರ, ಇಲ್ಲಿ ಎಲ್ಲರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ: ಸುಪ್ರೀಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಶ್ರೀ ಠಾಕೂರ್‌ ಅನುಕುಲ್‌ ಚಂದ್ರ ಅವರನ್ನು ದೇವರೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್‌ನ್ನು ವಜಾಗೊಳಿಸಿದ ಕೋರ್ಟ್ ಈ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು, ಪಿಐಎಲ್‌ ಸಲ್ಲಿಸಿದ್ದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ.

ಅರ್ಜಿದಾರ ಉಪೇಂದ್ರ ನಾಥ್‌ ದಾಲೈ ತನ್ನ ಅರ್ಜಿಯನ್ನು ಓದಲು ಮುಂದಾದ ವೇಳೆ ನಿಲ್ಲಿಸಿ ಎಂದ ಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೇ? ಇದು ಹೇಗೆ ಸಾಧ್ಯ? ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ. ಹೀಗಿರುವಾಗ ನಿರ್ಧಿಷ್ಟ ಧರ್ಮವನ್ನು ಪಾಲಿಸಿ ಅಂತಾ ಜನರಿಗೆ ನಾವು ಹೇಗೆ ಹೇಳಲು ಸಾಧ್ಯ? ನೀವು ಬೇಕಾದರೆ ಠಾಕೂರ್‌ ಚಂದ್ರರನ್ನು ಪರಮಾತ್ಮ ಎಂದು ಪರಿಗಣಿಸಿ. ಅದನ್ನು ಬೇರೆಯವರ ಮೇಲೆ ಯಾಕೆ ಹೇರುತ್ತೀರಿ ಎಂದು ಹೇಳಿದೆ.

ಅರ್ಜಿದಾರರ ಮನವಿಯು ಪ್ರಚಾರದಂತೆ ತೋರುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಠಾಕೂರ್‌ ಚಂದ್ರ ಅವರು ಬಾಂಗ್ಲಾದೇಶದ ಪಬ್ನಾದಲ್ಲಿ 1888ರ ಸೆಪ್ಟೆಂಬರ್ 14 ರಂದು ಜನಿಸಿದರು. ಅಧ್ಯಾತ್ಮ ಪ್ರತಿಪಾದಕರು. ಅಲ್ಲದೇ ಸತ್ಸಂಗದ ಸ್ಥಾಪಕರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!