ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರು ಮದುವೆ ಬಗ್ಗೆ ಇದ್ದ ವದಂತಿಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಮಹಾನಟಿ ಕೊನೆಗೂ ತನ್ನ ಭಾವಿ ಪತಿಯನ್ನು ಪರಿಚಯಿಸಿದ್ದಾರೆ.
ಇನ್ಸಾಟಗ್ರಾಂನಲ್ಲಿ ಭಾವಿ ಪತಿಯೊಂದಿಗಿರುವ ಫೋಟೋವನ್ನು ಫೋಸ್ಟ್ ಮಾಡಿ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.
ದೀಪಾವಳಿ ಆಚರಣೆ ಸಂದರ್ಭದಲ್ಲಿ ಇಬ್ಬರು ಕ್ಯಾಮರಾಗೆ ಬೆನ್ನು ಮಾಡಿ ಆಕಾಶದತ್ತ ಬೆಳಕು ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ, ಭಾವಿ ಪತಿಯ ಮುಖವನ್ನು ಬಹಿರಂಗಪಡಿಸಿಲ್ಲ.
ಆಂಟೋನಿ ಜೊತೆಗಿನ ಕಳೆದ 15 ವರ್ಷಗಳ ಸ್ನೇಹ ಜೀವನಪೂರ್ತಿ ಇರುತ್ತದೆ. ಎಂದೆಂದಿಗೂ ಆಂಟೋನಿ-ಕೀರ್ತಿ ಒಂದೇ ಎಂದು ಕೀರ್ತಿ ಸುರೇಶ್ ಬರೆಂದುಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರ ಈ ಫೋಸ್ಟ್ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಫೋಸ್ಟ್ ಗೆ ಪ್ರತಿಕ್ರಿಯಿಸುತ್ತಿದ್ದು,ಅಭಿನಂದನೆ ಸಲ್ಲಿಸುತ್ತಿದ್ದಾರೆ.